ವಾಲ್ಮೀಕಿ ನೀಡಿರುವ ಬದುಕಿನ ಪಾಠ ಜಗತ್ತಿಗೆ ಆದರ್ಶ: ಎ.ಸಿ. ಲೊಖಾಂಡೆ

Update: 2019-10-13 14:17 GMT

ಪುತ್ತೂರು: ರಾಮಾಯಣದಂತಹ ಮಹಾಕಾವ್ಯ ರಚಿಸಿರುವ ವಾಲ್ಮೀಕಿ ಬದುಕಿನಲ್ಲಿ ಪರಿವರ್ತನೆಗೊಂಡವರಾಗಿದ್ದು. ಕ್ರೌರ್ಯವನ್ನೇ ಬದುಕಾಗಿಸಿದ ಆತ ಬದಲಾವಣೆಗೊಂಡು ಮಹಾಕಾವ್ಯ ರಚಿಸುವ ಮೂಲಕ ಜಗತ್ತಿಗೆ ಬದುಕಿನ ಪಾಠವನ್ನು ನೀಡಿರುವ ಆದರ್ಶ ವ್ಯಕ್ತಿಯಾಗಿದ್ದಾರೆ ಎಂದು ಪುತ್ತೂರು ಉಪವಿಭಾಗದ ನೂತನ ಸಹಾಯಕ ಕಮಿಷನರ್ ಸ್ನೇಹಲ್ ಸುಧಾಕರ್ ಲೊಖಾಂಡೆ ಹೇಳಿದರು. 

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ರವಿವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಮಹಿರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿ ವಾಲ್ಮೀಕಿ ಸಂಸ್ಮರಣಾ ಜ್ಯೋತಿ ಪ್ರಜ್ವಲನೆ ಮಾಡಿ ಅವರು ಮಾತನಾಡಿದರು.

ವಳಾಲು ಸ. ಪ್ರೌ. ಶಾಲೆಯ ಶಿಕ್ಷಕಿ ಪುಷ್ಪಲತಾ ಎಂ. ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಾಲ್ಮೀಕಿ ಸಂಸ್ಮರಣೆ ಮಾಡುತ್ತಾ 
ಮನುಷ್ಯನ ಶ್ರೇಷ್ಠತೆ ಹುಟ್ಟಿನಿಂದ ನಿರ್ಧಾರವಾಗುವುದಲ್ಲ, ಬದಲಾಗಿ ಆತನ ಕಾರ್ಯ, ಸಾಧನೆ, ಸಮಾಜಕ್ಕೆ ಕೊಡುಗೆಯಿಂದ ಗುರುತಿಸಿ ಕೊಳ್ಳುತ್ತಾನೆ ಎನ್ನುವುದಕ್ಕೆ ಬಡ ರತ್ನಾಕರನಿಂದ ಮಹರ್ಷಿಯಾಗಿ ಬದಲಾದ ವಾಲ್ಕೀಕಿ ಉದಾಹರಣೆಯಾಗಿ ನಿಲ್ಲುತ್ತಾರೆ. 24 ಸಾವಿರ ಶ್ಲೋಕಗಳನ್ನೂ ಒಳಗೊಂಡ, ಪ್ರಪಂಚದಾದ್ಯಂತ ಅತಿ ಹೆಚ್ಚು ಭಾಷೆಗಳಿಗೆ ತರ್ಜುಮೆಯಾದ ಮಹಾಕಾವ್ಯವನ್ನು ಬರೆದ ವಾಲ್ಮೀಕಿ ಜಗತ್ತಿಗೆ ಎಂದಿಗೂ ಶ್ರೇಷ್ಠ ವ್ಯಕ್ತಿ ಎಂದು ಹೇಳಿದರು.

ಮಹರ್ಷಿಯ ಸಾಧನೆ ಕೇವಲ ರತ್ನಾಕರದಿಂದ ಬಂದಿಲ್ಲ. ಆತನ ಮನಪರಿವರ್ತನೆಯ ಹಾದಿಯಿಂದ ಈ ಸಾಧನೆ ಬಂದಿದೆ. ಮನುಕುಲದ ವಿಶಿಷ್ಟ ಮಾನವ ಎಂದು ಮಹಾಕವಿ ಕುವೆಂಪು ಅವರು ವಾಲ್ಮೀಕಿ ಕುರಿತು ಹೇಳಿದ ಪ್ರಸಂಶೆಯೇ ಅವರ ಸಾಧನೆಯನ್ನು ಎತ್ತಿತೋರಿಸುತ್ತದೆ. ವಾಲ್ಮೀಕಿ ಸಾಧನೆಯನ್ನು ಪ್ರೇರಣೆಯಾಗಿಸಿಕೊಂಡು ನಾವು ದೇಶ, ಸಮಾಜದ ಪ್ರಗತಿಗೆ ನೀಡುವ ಕಿರು ಕಾಣಿಕೆಯೇ ಅಂತಹ ಮಹಾತ್ಮರಿಗೆ ನೀಡುವ ಶ್ರೇಷ್ಠ ಗೌರವವೆನಿಸುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾತನಾಡಿ, ಮನುಷ್ಯ ಹುಟ್ಟುವಾಗ ಯಾವ ಜಾತಿಯಲ್ಲಿ ಹುಟ್ಟುತ್ತಾನೆ ಎಂದು ಗೊತ್ತಿರುವುದಿಲ್ಲ. ಆದರೆ ಛಲದ ಮೂಲಕ ಆತ ಮಾಡಿದ ಸಾಧನೆಗೆ ಸಿಗುವ ಗೌರವ ಅತ್ಯಂತ ದೊಡ್ಡದಾಗಿರುತ್ತದೆ ಎಂದರು.  ವಾಲ್ಮೀಕಿ ಜಯಂತಿಯಂತಹ ಕಾರ್ಯಕ್ರಮಗಳು ಕೇವಲ ಸರಕಾರಿ ಕಾರ್ಯಕ್ರಮವಾಗಿರದೆ ಆ ಸಮುದಾಯದ ಸಂಘಟನೆಗಳೆಲ್ಲವೂ ಸೇರಿಕೊಂಡು ವಿಜ್ರಂಭನೆಯಿಂದ ಆಚರಿಸುವ ಕಾರ್ಯಕ್ರಮವಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿದ್ದು ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ  ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. ಎಸೆಸೆಲ್ಸಿ ಸಾಧಕರಾದ ಧನಂಜಯ, ಸುಮನ್ ಕೆ.ಎಚ್., ಚೈತ್ರಾ, ನಂದಿನಿ, ಗೌತಮಿ ಹಾಗೂ ದ್ವಿತೀಯ ಪಿಯುಸಿ ಸಾಧಕಿ ಪವಿತ್ರಾ ಪಿ. ಅವರನ್ನು ಗೌರವಿಸಲಾಯಿತು.

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರಾದ ತಹಶೀಲ್ದಾರ್ ಅನಂತ ಶಂಕರ್, ತಾ.ಪಂ. ಕಾರ್ಯನಿರ್ವಹಣಾ„ಕಾರಿ ನವೀನ್ ಭಂಡಾರಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಗಾಯತ್ರಿ ಸಿ.ಎಚ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಕೊಂಬೆಟ್ಟು ವಸತಿ ನಿಲಯದ ಮೇಲ್ವಿಚಾರಕ ತಾರಾನಾಥ ಸ್ವಾಗತಿಸಿದರು.  ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News