ಮಹಾಬಲಿಪುರಂನಲ್ಲಿ ಸಾಗರದೊಡನೆ ತನ್ನ 'ಸಂವಾದ 'ಕುರಿತು ಕವನ ರಚಿಸಿದ ಪ್ರಧಾನಿ

Update: 2019-10-13 15:11 GMT

ಹೊಸದಿಲ್ಲಿ,ಅ.13: ಶನಿವಾರ ನಸುಕಿನಲ್ಲಿ ಚೆನ್ನೈ ಸಮೀಪದ ಮಹಾಬಲಿಪುರಂ ಬೀಚ್‌ನಲ್ಲಿ ನಡೆಸಿದ್ದ ವಾಯುವಿಹಾರ ಪ್ರಧಾನಿ ನರೇಂದ್ರ ಮೋದಿಯವರಲ್ಲಿನ ಕವಿಯನ್ನು ಬೆಳಕಿಗೆ ತಂದಿದೆ.

''ಬೀಚ್‌ನಲ್ಲಿ ಅಲೆದಾಡುತ್ತಿದ್ದಾಗ ನಾನು ಸಾಗರದೊಡನೆ 'ಸಂವಾದ'ದಲ್ಲಿ ಕಳೆದುಹೋಗಿದ್ದೆ. ಈ ಸಂವಾದವು ನನ್ನ ಭಾವನೆಗಳ ಜಗತ್ತನ್ನೇ ಹೊತ್ತಿತ್ತು. ನನ್ನ ಭಾವನೆಗಳನ್ನು ಕವನದ ರೂಪದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ''ಎಂದು ಮೋದಿ ರವಿವಾರ ಹಿಂದಿಯಲ್ಲಿ ಟ್ವೀಟಿಸಿದ್ದಾರೆ.

ಮಹಾಬಲಿಪುರಂ ಬೀಚ್‌ನಲ್ಲಿ ವಾಯುವಿಹಾರದ ವೇಳೆ ತಾನು ತ್ಯಾಜ್ಯಗಳನ್ನು ಹೆಕ್ಕಿದ್ದ ಮೂರು ನಿಮಿಷಗಳ ವೀಡಿಯೊವನ್ನು ಬಿಡುಗಡೆ ಮಾಡಿದ್ದ ಮೋದಿ,ಸಾರ್ವಜನಿಕ ಸ್ಥಳಗಳು ಸ್ವಚ್ಛವಾಗಿರುವಂತೆ ನೋಡಿಕೊಳ್ಳುವಂತೆ ಜನತೆಯನ್ನು ಆಗ್ರಹಿಸಿದ್ದರು.

ಎಂಟು ಚರಣಗಳ ಕವನದಲ್ಲಿ ಮೋದಿ ಸೂರ್ಯನೊಂದಿಗೆ ಸಾಗರದ ಸಂಬಂಧ,ಅದರ ಅಲೆಗಳು ಮತ್ತು ಅದರ ನೋವನ್ನು ಬಣ್ಣಿಸಿದ್ದಾರೆ.

ಅವರ ಕವನ ಸಂಕಲನ 'ಎ ಜರ್ನಿ 'ಈಗಾಗಲೇ ಲಭ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News