ಸ್ವದೇಶದಲ್ಲಿ ಗರಿಷ್ಠ ಸರಣಿ ಜಯಿಸಿ ವಿಶ್ವದಾಖಲೆ ನಿರ್ಮಿಸಿದ ಕೊಹ್ಲಿಪಡೆ

Update: 2019-10-13 18:24 GMT

ಪುಣೆ,ಅ.13: ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಇನಿಂಗ್ಸ್ ಅಂತರದಿಂದ ಸದೆಬಡಿದ ಭಾರತ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ವಶಪಡಿಸಿಕೊಂಡಿದೆ. ಸ್ವದೇಶದಲ್ಲಿ ಸತತ 11ನೇ ಟೆಸ್ಟ್ ಸರಣಿ ವಶಪಡಿಸಿಕೊಂಡು ನೂತನ ವಿಶ್ವ ದಾಖಲೆ ನಿರ್ಮಿಸಿದೆ. ಈ ಮೂಲಕ ಎರಡು ಬಾರಿ ಸತತ 10 ಟೆಸ್ಟ್ ಸರಣಿಗಳನ್ನು ಜಯಿಸಿದ್ದ ಆಸ್ಟ್ರೇಲಿಯದ 10 ವರ್ಷಗಳ ಹಳೆಯ ದಾಖಲೆ ಮುರಿದಿದೆ.ಆಸ್ಟ್ರೇಲಿಯ 1994-95ರಿಂದ 2000-01 ಹಾಗೂ 2004ರಿಂದ 2008-09ರ ಮಧ್ಯೆ ಎರಡು ಬಾರಿ ಸತತ 10 ಟೆಸ್ಟ್ ಸರಣಿಗಳನ್ನು ಜಯಿಸಿತ್ತು. ವೆಸ್ಟ್ ಇಂಡೀಸ್ 1975-76, 1985-86ರ ಮಧ್ಯೆ ಸತತ 8 ಸ್ವದೇಶಿ ಸರಣಿಗಳನ್ನು ಗೆದ್ದುಕೊಂಡಿತ್ತು. ಭಾರತ 2012-13ರ ಋತುವಿನಿಂದ ಆರಂಭಿಸಿ ಸತತ 11 ಟೆಸ್ಟ್ ಸರಣಿಗಳನ್ನು ಜಯಿಸಿದೆ. ಟೀಮ್ ಇಂಡಿಯಾ 2012ರಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ಕೊನೆಯ ಬಾರಿ 1-2 ಅಂತರದಿಂದ ಟೆಸ್ಟ್ ಸರಣಿ ಸೋತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News