ಮೆಡ್ವೆಡೆವ್‌ಗೆ ಶಾಂಘೈ ಮಾಸ್ಟರ್ಸ್ ಪ್ರಶಸ್ತಿ

Update: 2019-10-13 18:29 GMT

ಶಾಂಘೈ,ಅ.13: ಅಲೆಕ್ಸಾಂಡರ್ ಝ್ವೆರೆವ್ ವಿರುದ್ಧ ನೇರ ಸೆಟ್‌ಗಳ ಅಂತರದಿಂದ ಜಯ ಸಾಧಿಸಿರುವ ಡೆನಿಲ್ ಮೆಡ್ವೆಡೆವ್ ಶಾಂೈ ಮಾಸ್ಟರ್ಸ್ ಟೆನಿಸ್ ಪ್ರಶಸ್ತಿ ಮುಡಿಗೇರಿಸಿಕೊಂಡರು.

ರವಿವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಫೈನಲ್ ಹಣಾಹಣಿಯಲ್ಲಿ 23ರ ಹರೆಯದ ರಶ್ಯದ ಮೆಡ್ವೆಡೆವ್ ಜರ್ಮನಿ ಆಟಗಾರನನ್ನು 6-4, 6-1 ಸೆಟ್‌ಗಳ ಅಂತರದಿಂದ ಮಣಿಸಿ ದರು.

ಈ ವರ್ಷ ಸತತ ಆರನೇ ಫೈನಲ್ ಪಂದ್ಯವನ್ನು ಆಡಿದ ಮೆಡ್ವೆಡೆವ್ ನಾಲ್ಕನೇ ಪ್ರಶಸ್ತಿ ತನ್ನದಾಗಿಸಿಕೊಂಡರು. ಈ ಮೂಲಕ ಱಬಿಗ್ ತ್ರಿೞ ಖ್ಯಾತಿಯ ನೊವಾಕ್ ಜೊಕೊವಿಕ್, ರಫೆಲ್ ನಡಾಲ್ ಹಾಗೂ ರೋಜರ್ ಫೆಡರರ್ ಸಾಲಿಗೆ ಸೇರುವ ಪ್ರಬಲ ಸ್ಪರ್ಧಿ ಎಂದು ಸಾಬೀತುಪಡಿಸಿದ್ದಾರೆ.

ಯು.ಎಸ್. ಓಪನ್‌ನಲ್ಲಿ ಫೈನಲ್ ತಲುಪಿದ್ದ ಮೆಡ್ವೆಡೆವ್ ಅವರು ಝ್ವೆರೆವ್ ವಿರುದ್ಧ ಆಡಿದ 5ನೇ ಪಂದ್ಯದಲ್ಲಿ ಕೊನೆಗೂ ಜಯ ದಾಖಲಿಸಿದರು. ಕೇವಲ 74 ನಿಮಿಷಗಳಲ್ಲಿ ಪಂದ್ಯ ವಶಪಡಿಸಿಕೊಂಡ ವಿಶ್ವದ ನಂ.4ನೇ ಆಟಗಾರ ಮಡ್ವೆಡೆವ್ ಎಲ್ಲರ ಗಮನಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News