ಮಂಗಳೂರು ಸಿಸಿಬಿ ಕಾರ್ಯಾಚರಣೆ: ಕೋಕೆನ್ ಸಹಿತ ಮೂವರು ಆರೋಪಿಗಳು ಸೆರೆ

Update: 2019-10-14 07:10 GMT

ಮಂಗಳೂರು: ನಗರದ ಸಾರ್ವಜನಿಕರಿಗೆ ಮಾದಕ ವಸ್ತು ಕೋಕೆನ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಇಕಾನಾಮಿಕ್ ಆ್ಯಂಡ್ ನಾರ್ಕೋಟಿಕ್ ಠಾಣೆ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದು ಕೊಂಡಿದ್ದಾರೆ.

ಬಂಧಿತರನ್ನು ಪಳ್ನೀರ್ ನಿವಾಸಿ ಫಾಸೀಮ್ ನೌಷಿಬ್ (25), ಮಂಜೇಶ್ವರ ಕುಂಜೆತ್ತೂರು ನಿವಾಸಿ ಅಫ್ಝಲ್ ಹುಸೈನ್ (28), ಫಳ್ನೀರ್ ನಿವಾಸಿ  ಝಾಹಿದ್ (26) ಎಂದು ತಿಳಿದುಬಂದಿದೆ.

ಕಂಕನಾಡಿ ಜಂಕ್ಷನ್ ರೈಲ್ವೇ ಸಿಬ್ಬಂದಿಗಳ ಸ್ಟಾಪ್ ಕ್ವಾಟ್ರಸ್ ಬಳಿಯಿಂದ ಕಾರು ಸಹಿತ ವಶಕ್ಕೆ ಪಡೆದುಕೊಂಡು ಅವರಿಂದ ಸುಮಾರು 30 ಗ್ರಾಂ ತೂಕದ  2,40,000 ರೂ. ಮೌಲ್ಯದ ಕೋಕೆನ್ ವಶಕ್ಕೆ ಪಡೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News