ಮಂಗಳೂರು: ಈ ಗುಂಡಿಗೆ ಯಾರನ್ನು ಬೀಳಿಸಲು ಕಾಯುತ್ತಿದ್ದೀರಿ ?

Update: 2019-10-14 08:12 GMT

ಮಂಗಳೂರು: ವೆನ್ಲಾಕ್ ಆಸ್ಪತ್ರೆಯ ಆವರಣದ ಹಿಂಭಾಗ, ಅತ್ತಾವರದಿಂದ ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಸಾಗುವ ರಸ್ತೆಯ ಫುಟ್ ಪಾತ್ ತೆರೆದಿದ್ದು, ಇದು ಅಪಾಯಕ್ಕೆ ಎಡೆಮಾಡಿಕೊಟ್ಟಂತಿದೆ.

ರಾತ್ರಿ ವೇಳೆ ಇಲ್ಲಿ ಅನೇಕ ನಿರ್ಗತಿಕರು ಮಲಗುತ್ತಾರೆ. ತೆರೆದ ಫುಟ್ ಪಾತ್ ಸುಮಾರು 1 ಮೀಟರ್ ಗಿಂತಲೂ ಅಧಿಕ ಆಳವಾಗಿದ್ದು  ಪಾದಚಾರಿಗಳು ಬೀಳುವ ಸಾಧ್ಯತೆ ಹೆಚ್ಚಿದೆ.

ಇಲ್ಲಿ ದಿನನಿತ್ಯ ನೂರಾರು ಪ್ರಯಾಣಿಕರು ರೈಲ್ವೆ ಸ್ಟೇಷನ್ ಗೆ ಸಂಚರಿಸುತ್ತಾರೆ. ಇದೀಗ ಫುಟ್ ಪಾತ್ ತೆರೆದಿದ್ದು, ಪಾದಚಾರಿಗಳಿಗೆ ಭಾರೀ ಅಪಾಯ ಉಂಟುಮಾಡಿದೆ.

ಮಂಗಳೂರಿನ ಸ್ಮಾರ್ಟ್ ಸಿಟಿ ಯೋಜನೆಯ ವೈಫಲ್ಯತೆಯನ್ನು ಹೊರ ಜಿಲ್ಲೆಯ ಅಥವಾ ರಾಜ್ಯದ ಪ್ರಯಾಣಿಕರಿಗೆ ತೋರಿಸಲು ಇದೊಂದು ಉದಾಹರಣೆ, ಪಾಲಿಕೆಯು ಕಾಮಗಾರಿಗೆ ಚಾಲನೆ ನೀಡುತ್ತೆ, ಆದರೆ ಕೆಲಸ ಪೂರ್ತಿಯಾಗುವವರೆಗೆ ಆಕಡೆ ತಲೆ ಎತ್ತಿಯೂ ನೋಡುತ್ತಿಲ್ಲಾ. ಇದು ಮನಪಾದ ಬೇಜವಾಬ್ದಾರಿತನ. 

-ಸೋಮನಾಥ್, ಪಾದಚಾರಿ

ಇಲ್ಲಿ ದಿನನಿತ್ಯ ಹಲವಾರು ಪಾದಚಾರಿಗಳು ಸಂಚಾರಿಸುತ್ತಾರೆ. ಕಣ್ತಪ್ಪಿನಿಂದ ಫುಟ್ ಪಾತ್ ನೊಳಗೆ ಬೀಳುವ ಸಂಭವವೂ ಹೆಚ್ಚು. ಇದರಿಂದ ಪಾದಚಾರಿಗಳಿಗೆ ಪ್ರಾಣಾಪಾಯ ಇದೆ. 

-ಜನಾರ್ಧನ್, ಪಾದಚಾರಿ

ಈ ಮೊದಲು ಇದಕ್ಕೆ ಕಬ್ಬಿಣದ ಮುಚ್ಚಳವನ್ನು ಅಳವಡಿಸಲಾಗಿತ್ತು, ರಾತ್ರಿ ವೇಳೆ ಕಳವಾಗಿರುವ ಸಾಧ್ಯತೆ ಇದೆ‌. ಈ ಬಗ್ಗೆ ಪಾಲಿಕೆ ಎಚ್ಚೆತ್ತು ಮುಂಬರುವ ಅಪಾಯವನ್ನು ತಡೆಯಬೇಕಾಗಿದೆ.

-ರಫೀಕ್ , ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News