ಕದ್ರಿ ಗೋಪಾಲನಾಥ್ ಪಾರ್ಥಿವ ಶರೀರಕ್ಕೆ ದ.ಕ. ಜಿಲ್ಲಾಡಳಿತ ವತಿಯಿಂದ ಗೌರವ

Update: 2019-10-14 10:09 GMT

ಮಂಗಳೂರು, ಅ.14: ಖ್ಯಾತ ಸ್ಯಾಕ್ಸೋಫೋನ್ ವಾದಕ, ಪದ್ಮಶ್ರಿ  ಪುರಸ್ಕೃತ ಕದ್ರಿ ಗೋಪಾಲನಾಥ್ ಅವರ ಪಾರ್ಥಿವ ಶರೀರವನ್ನು ಸಾರ್ವ ಜನಿಕರ ವೀಕ್ಷಣೆಗೆ ನಗರದ ಪುರಭವನದಲ್ಲಿ ಇರಿಸಿದ ಸಂದರ್ಭ ದ.ಕ. ಜಿಲ್ಲಾಡಳಿತ ಮತ್ತು ಮನಪಾ ವತಿಯಿಂದ ಗೌರವ ಸಲ್ಲಿಸಲಾಯಿತು.

ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ ಪೂಜಾರಿ, ಸಂಸದ ನಳಿನ್  ಕುಮಾರ್ ಕಟೀಲ್ ,ಮನಪಾ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ಜಿಲ್ಲಾಧಿಕಾರಿ ಸಿಂಧೂ ರೂಪೇಶ್  ಹಾಗೂ ಇತರ ಗಣ್ಯರು ಜಿಲ್ಲಾಡಳಿತ ಮತ್ತು ಮನಪಾ ವತಿಯಿಂದ ಗೌರವ ಸಲ್ಲಿಸಿದರು.

ನಗರದ ಪದವಿನಂಗಡಿಯಿಂದ  ಪುರಭವನಕ್ಕೆ ಅವರ ಪಾರ್ಥಿವ ಶರೀರವನ್ನು ತರಲಾಯಿತು. ಬಳಿಕ ಅವರ ಪಾರ್ಥಿವ ಶರೀರವನ್ನು ಅಂತ್ಯ ಸಂಸ್ಕಾರಕ್ಕಾಗಿ ಅವರ ಹುಟ್ಟೂರಾದ ಸಜಿಪ ನಡುವಿಗೆ ಮಧ್ಯಾಹ್ನ ಕೊಂಡೊಯ್ಯಲಾಯಿತು. ಜಿಲ್ಲಾಡಳಿತ ದಿಂದ ಸಜಿಪ ನಡುವಿನಲ್ಲಿ ಇಂದು ಸಂಜೆ ಅಂತಿಮ ಗೌರವಾರ್ಪಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News