ಪದವಿನಂಗಡಿ ಕೊರಗಜ್ಜ ಕಟ್ಟೆ ಪ್ರಕರಣ, ಪ್ರತಿಭಟನೆ: ಪತ್ರಿಕಾಗೋಷ್ಠಿ

Update: 2019-10-14 10:10 GMT

ಮಂಗಳೂರು, ಅ.14: ಪದವಿನಂಗಡಿಯ ಕೊರಗಜ್ಜ ಕಟ್ಟೆ ಪ್ರಕರಣಕ್ಕೆ ಸಂಬಂಧಿಸಿ ದಲಿತ ಸಂಘಟನೆಗಳ ಎರಡು ಗುಂಪುಗಳಿಂದು ಪ್ರತ್ಯೇಕವಾಗಿ ಪ್ರತಿಭಟನೆ ಹಾಗೂ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಪರಸ್ಪರ ಪರ- ವಿರೋಧವನ್ನು ವ್ಯಕ್ತಪಡಿಸಿದ ಘಟನೆ ನಡೆದಿದೆ.

ಕೊರಗಜ್ಜ ಕಟ್ಟೆಯ ಗರ್ಭಗುಡಿಯ ಬೀಗ ಮುರಿದು ಧಾರ್ಮಿಕ ನಂಬಿಕಗಳಿಗೆ ಸಹಕಾರ ಸಂಘಗಳ ಉಪ ನಿಬಂಧಕರು ಧಕ್ಕೆ ಉಂಟುಮಾಡಿದ್ದು, ಅವರನ್ನು ಅಮಾನತು ಗೊಳಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾಧ)ಯ ದ.ಕ. ಜಿಲ್ಲಾ ಶಾಖೆ ಹಾಗೂ ಮಂಗಳೂರು ತಾಲೂಕು ಶಾಖೆ ನೇತೃತ್ವದಲ್ಲಿ ಜನತಾ ಬಜಾರ್ ಎದುರು ಮೌನ ಪ್ರತಿಭಟನೆ ನಡೆಯಿತು.

ನಾಡಿನ ಸರ್ವಜನರು ನಂಬಿಕೊಂಡು ಬಂದಿರುವ ಕೊರಗಜ್ಜ ಕಟ್ಟೆಯ ಗರ್ಭಗುಡಿಯ ಬೀಗ ಮುರಿದು ಧಾರ್ಮಿಕ ನಂಬಿಕೆಗಳಿಗೆ ಸಹಾಕರ ಸಂಘಗಳ ಉಪ ನಿಬಂಧಕ ಧಕ್ಕೆ ಎಸಗಿದ್ದಾರೆ. ಜವಾಬ್ಧಾರಿಯುತ ಅಧಿಕಾರಿಯಾಗಿ ಈ ರೀತಿ ವರ್ತಿಸಿರುವ ಅವರನ್ನು ಅಮಾನತುಗೊಳಿಸಬೇಕು ಎಂದು ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಜಗದೀಶ್ ಪಾಂಡೇಶ್ವರ ನೇತೃತ್ವದಲ್ಲಿ ದಲಿತರು ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಸೇಸಪ್ಪ ನೆಕ್ಕಿಲು, ಮೂಡಬಿದ್ರೆ ತಾಲೂಕು ಸಂಚಾಲಕ ಹೊನ್ನಯ್ಯ ತೋಡಾರು, ತಾಲೂಕು ಸಮಿತಿಯ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಪದವಿನಂಗಡಿ ಕೊರಗಜ್ಜ ಕಟ್ಟೆ ಭಕ್ತರು ಉಪಸ್ಥಿತರಿದ್ದರು.

ನಿಬಂಧಕರ ಕ್ರಮಕ್ಕೆ ಸ್ವಾಗತ

ಇದೇ ವೇಳೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪರಿವರ್ತನಾ ವಾದ ಘಟಕವು ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ನ್ಯಾಯಾಲಯದ ಆದೇಶದಂತೆ ಸರಕಾರದಿಂದ ಕೊರಗಜ್ಜ ಕ್ಷೇತ್ರದ ಅಭಿವೃದ್ಧಿ ನಡೆಸಲಾಗಿದೆ ಎಂದು ಸ್ವಾಗತಿಸಿತು.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪರಿವರ್ತನ ವಾದ ಘಟಕದ ಅಶೋಕ್ ಕೊಂಚಾಡಿ, ಕ್ಷೇತ್ರದ ಆಡಳಿತ ಮಂಡಳಿಯಲ್ಲಿ ಉಂಟಾದ ಸಮಸ್ಯೆಗಳ ಬಗ್ಗೆ ಒಂದು ಗುಂಪು ನ್ಯಾಯಾಲಯದ ಮೆಟ್ಟಲೇರಿತ್ತು. ದೂರುದಾರರು ನೀಡಿದ ಸಾಕ್ಷಗಳನ್ನು ಪರಿಶಿೀಲಿಸಿದ ನ್ಯಾಯಾಲಯ, ಭಕ್ತರ ಧಾರ್ಮಿಕ ಭಾವನೆಗಳನ್ನು ಉಳಿಸಿಕೊಂಡು ಪಾರಂಪರಿಕವಾಗಿ ಉಳಿದುಕೊಂಡು ಬಂದಿರುವ ನಂಬಿಕೆ, ಆಚರಣೆಯನ್ನು ಉಳಿಸಿಕೊಂಡು ಸಂಪೂರ್ಣ ಸುಧಾರಣೆ ನಡೆಸಿ ಕ್ಷೇತ್ರವನ್ನು ಬೆಳಗಿಸುವಂತೆ ಸಹಕಾರ ಸಂಘಗಳ ಜಂಟಿ ನಿಬಂಧಕರಿಗೆ ಸೂಕ್ತ ನಿರ್ದೇಶನ ನೀಡಿದೆ. ಅದರಂತೆ ಜಂಟಿ ನಿಬಂಧಕರು ಕ್ಷೇತ್ರದ ಪಾವಿತ್ರತೆಯನ್ನು ಅರಿತು ನ್ಯಾಯಾಲಯದ ನಿರ್ದೇಶದನದಂತೆ ಸುಧಾರಣೆ ನಡೆಸುತ್ತಿರುವುದು ಸ್ವಾಗತಾರ್ಹ ಎಂದು ಹೇಳಿದರು.

ಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ರೆುೀಶ್ ಕೋಟ್ಯಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News