ಪಾಣೆಮಂಗಳೂರು : ಮರ್ಹೂಮ್ ಮಿತ್ತಬೈಲ್ ಜಬ್ಬಾರ್ ಉಸ್ತಾದ್ ಸ್ಮರಣಾರ್ಥ ರಕ್ತದಾನ ಶಿಬಿರ

Update: 2019-10-14 10:59 GMT

ಬಂಟ್ವಾಳ  : ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ  ಹಾಗೂ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್, ಎಸ್ ಕೆ ಎಸ್ ಎಸ್ ಎಫ್ ಆಲಡ್ಕ ಶಾಖೆ  ಆಶ್ರಯದಲ್ಲಿ ಕಣಚೂರು ಆಸ್ಪತ್ರೆ ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವು ಪಾಣೆಮಂಗಳೂರಿನಲ್ಲಿ ನಡೆಯಿತು.

ಸಭಾ ಕಾರ್ಯಕ್ರಮವು ಎಸ್ ಕೆ ಎಸ್ ಎಸ್ ಎಫ್ ಆಲಡ್ಕ ಯುನಿಟ್ ಅಧ್ಯಕ್ಷ ಎನ್.ಬಿ ಅಬೂಬಕರ್ ಹಾಜಿ ಅಧ್ಯಕ್ಷತೆಯಲ್ಲಿ ಎಸ್ ಕೆ ಎಸ್ ಎಸ್ ಎಫ್ ಪಾಣೆಮಂಗಳೂರು ಅಧ್ಯಕ್ಷ ಅಬೂ ಸ್ವಾಲಿಹ್ ಫೈಝಿ ಉದ್ಘಾಟಿಸಿ, ಶುಭ ಹಾರೈಸಿದರು.  ಎಸ್ ಕೆ ಎಸ್ ಎಸ್ ಎಫ್ ಬಂಟ್ವಾಳ ವಲಯ ಅಧ್ಯಕ್ಷ ಇರ್ಷಾದ್ ದಾರಿಮಿ ದುವಾಶಿರ್ವಚನ ನೀಡಿದರು.

ಮುಖ್ಯ ಅತಿಥಿಯಾಗಿ  ಅಬ್ದುಲ್ ದಾರಿಮಿ ಕುಕ್ಕಿಲ, ಅಬ್ದುಲ್ ಖಾದರ್ ಮದನಿ, ಖಲೀಲ್ ದಾರಿಮಿ, ಫೈರೋಝ್ ವಲಚ್ಚಿಲ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಕಾರ್ಯನಿರ್ವಾಹಕರು ಉಪಸ್ಥಿತರಿದ್ದರು.

ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಒಟ್ಟು 315 ಮಂದಿ ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆದುಕೊಂಡರು. 75 ಮಂದಿಗೆ ಕಣಚೂರು ಆಸ್ಪತ್ರೆಯಲ್ಲಿ ಉಚಿತವಾಗಿ ಹೆಚ್ಚಿನ ಚಿಕಿತ್ಸೆಗಾಗಿ ಶಿಫಾರಸು ಮಾಡಲಾಯಿತು. 18 ಮಂದಿ ರಕ್ತ ನೀಡಿ ಜೀವದಾನಿಗಳಾದರು. ದಾನಿಗಳಿಂದ ರಕ್ತ ಸಂಗ್ರಹ ಹಾಗೂ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕಣಚೂರು ಆಸ್ಪತ್ರೆ ದೇರಳಕಟ್ಟೆ  ಇದರ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News