×
Ad

ಭಾರತದ ಆರ್ಥಿಕತೆ ಕಂಪಿಸುತ್ತಿದೆ: ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ

Update: 2019-10-14 19:36 IST

ಕೊಲ್ಕತ್ತಾ, ಅ.14: ಭಾರತದ ಆರ್ಥಿಕತೆಯು ಕಂಪಿಸುತ್ತಿದೆ ಎಂದು 2019ರ ನೊಬೆಲ್ ಪ್ರಶಸ್ತಿ ಪುರಸ್ಕೃತ ಭಾರತೀಯ -ಅಮೆರಿಕನ್ ಅಭಿಜಿತ್ ಬ್ಯಾನರ್ಜಿ ಹೇಳಿದ್ದಾರೆ.

ಸದ್ಯ ಲಭ್ಯವಿರುವ ಅಂಕಿಅಂಶಗಳು ಸದ್ಯಕ್ಕಂತೂ ದೇಶದ ಆರ್ಥಿಕತೆ ಸುಧಾರಿಸುವ ಖಾತರಿಯನ್ನು ತೋರಿಸುತ್ತಿಲ್ಲ ಎಂದವರು ಹೇಳಿದರು.

"ಕಳೆದ 5-6 ವರ್ಷಗಳಲ್ಲಿ ನಾವು ಸ್ವಲ್ಪ ಪ್ರಗತಿಯನ್ನಾದರೂ ಕಾಣಬೇಕಿತ್ತು. ಆದರೆ ಈಗ ಆ ಭರವಸೆಯೂ ಇಲ್ಲ" ಎಂದು ಮಾಧ್ಯಮವೊಂದರಲ್ಲಿ ಮಾತನಾಡುತ್ತಾ ಅವರು ಹೇಳಿದರು.

ಜಾಗತಿಕ ಬಡತನವನ್ನು ನಿವಾರಿಸುವಲ್ಲಿ ಪ್ರಾಯೋಗಿಕ ಪ್ರಯತ್ನಗಳಿಗಾಗಿ ಅಭಜಿತ್ ಬ್ಯಾನರ್ಜಿ ಈ ಬಾರಿಯ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News