ಕಾಶ್ಮೀರಿಗಳಿಗೆ ಟೆಲಿಫೋನ್ ಮುಖ್ಯವಲ್ಲ ಎಂದ ರಾಜ್ಯಪಾಲ ಸತ್ಯಪಾಲ್ ಮಲಿಕ್ !

Update: 2019-10-14 15:40 GMT

ಶ್ರೀನಗರ, ಎ. 14: ಕಾಶ್ಮೀರಿಗಳಿಗೆ ಫೋನ್ ಲೈನ್ ತುಂಬಾ ಮುಖ್ಯವಾಗಿರಲಿಲ್ಲ. ಫೋನ್ ಲೈನ್ ‌ಗಳನ್ನು ಭಯೋತ್ಪಾದಕರು ಮಾತ್ರ ಬಳಸುತ್ತಿದ್ದರು ಎಂದು ಜಮ್ಮು ಹಾಗೂ ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ.

ಸೋಮವಾರ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಮಲಿಕ್, ನಮಗೆ ಟೆಲಿಫೋನ್ ಮುಖ್ಯವಲ್ಲ. ಆದರೆ, ಅದಕ್ಕಿಂತ ನಿವಾಸಿಗಳ ಬದುಕು ಮುಖ್ಯ ಎಂದಿದ್ದಾರೆ. ‘‘ಈ ಹಿಂದೆ ಕೂಡ ಜನರು ಟೆಲಿಫೋನ್ ಇಲ್ಲದೆ ಜೀವಿಸುತ್ತಿದ್ದರು. ಭಯೋತ್ಪಾದಕರನ್ನು ಸಜ್ಜುಗೊಳಿಸಲು ಟೆಲಿಫೋನ್ ಅನ್ನು ಬಳಸಲಾಗುತ್ತಿದೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು’’ ಎಂದು ಮಲಿಕ್ ತಿಳಿಸಿದ್ದಾರೆ.

ಕಣಿವೆಯಲ್ಲಿ ಇಂಟರ್‌ನೆಟ್ ಸೇವೆಯನ್ನು ಶೀಘ್ರದಲ್ಲಿ ಕಾರ್ಯಾರಂಭಿಸಲಾಗುವುದು ಎಂದು ಮಲಿಕ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News