ಈ ಆರ್ಥಿಕ ವರ್ಷದಲ್ಲಿ ಒಂದೇ ಒಂದು 2,000 ರೂ. ನೋಟು ಮುದ್ರಣವಾಗಿಲ್ಲ: ಆರ್ ಟಿಐಯಿಂದ ಬಹಿರಂಗ

Update: 2019-10-15 13:19 GMT

ಹೊಸದಿಲ್ಲಿ, ಅ.15: ಈ ಆರ್ಥಿಕ ವರ್ಷದಲ್ಲಿ ಭಾರತದ ನೋಟುಗಳನ್ನು ಮುದ್ರಿಸುವ ದ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈ.ಲಿ. ಒಂದೇ ಒಂದು 2000 ರೂ. ನೋಟನ್ನು ಮುದ್ರಿಸಿಲ್ಲ ಎನ್ನುವುದು ಆರ್ ಟಿಐ ಉತ್ತರದಿಂದ ತಿಳಿದುಬಂದಿದೆ ಎಂದು newindianexpress.com  ವರದಿ ಮಾಡಿದೆ.

ಇತ್ತೀಚಿನ ದಿನಗಳಲ್ಲಿ 2,000 ರೂ. ನೋಟು ಎಟಿಎಂಗಳಲ್ಲಿ ಹೆಚ್ಚಾಗಿ ಬರದೇ ಇರುವುದಕ್ಕೆ ಇದೇ ಕಾರಣ ಎನ್ನಲಾಗಿದೆ. ಈಗಾಗಲೇ 2000 ರೂ. ನೋಟನ್ನು ಮುದ್ರಿಸುವುದನ್ನು ಆರ್ ಬಿಐ ನಿಲ್ಲಿಸಿದೆ ಎನ್ನುವುದು ಕೂಡ ಆರ್ ಟಿಐ ಉತ್ತರದಿಂದ ಬಹಿರಂಗವಾಗಿದೆ ವರದಿಯಾಗಿದೆ.

"ಕಪ್ಪು ಹಣ ವಹಿವಾಟುಗಳಿಗೆ ಕಡಿವಾಣ ಹಾಕಲು ದೊಡ್ಡ ಮೌಲ್ಯದ ನೋಟುಗಳ ಚಲಾವಣೆಯನ್ನು ಕಡಿಮೆಗೊಳಿಸುವುದು ನೆರವಾಗಬಹುದು. ಆದರೆ ಇದು ನೋಟು ನಿಷೇಧಕ್ಕಿಂತ ಉತ್ತಮ ನಡೆ" ಎಂದು ಆರ್ಥಿಕ ತಜ್ಞ ನಿತಿನ್ ದೇಸಾಯಿ ಹೇಳುತ್ತಾರೆ.

""ಜನರ ಬಳಿ ಹೆಚ್ಚು ನಗದು ಅಥವಾ ಕಪ್ಪು ಹಣ ಇರುವುದನ್ನು ತಡೆಯಲು ಅವರು ಈ ಕ್ರಮಕ್ಕೆ ಮುಂದಾಗಿರಬಹುದು. ಸರಕಾರವು ಹೆಚ್ಚಿನ ಡಿಜಿಟಲ್ ವ್ಯವಹಾರಗಳನ್ನು ಬಯಸುತ್ತಿದೆ" ಎಂದು ಮತ್ತೊಬ್ಬ ತಜ್ಞ ಶೇರ್ ಸಿಂಗ್ ಅಭಿಪ್ರಾಯಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News