ಬಿಜೆಪಿ ಗೋಡ್ಸೆಗೂ ‘ಭಾರತರತ್ನ’ ನೀಡುತ್ತೇವೆ ಎನ್ನಬಹುದು

Update: 2019-10-15 17:31 GMT

ಮುಂಬೈ,ಅ.15: ವಿ.ಡಿ.ಸಾವರ್ಕರ್ ಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡುವುದಾಗಿ ಹೇಳಿದ್ದಕ್ಕಾಗಿ ಬಿಜೆಪಿಯನ್ನು ಮಂಗಳವಾರ ತರಾಟೆಗೆತ್ತಿಕೊಂಡ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಅವರು,ಆಡಳಿತ ಪಕ್ಷವು ಮಹಾತ್ಮಾ ಗಾಂಧಿಯವರ ಹಂತಕ ನಾಥುರಾಮ ಗೋಡ್ಸೆಯ ಹೆಸರನ್ನೂ ಭಾರತ ರತ್ನ ಪ್ರಶಸ್ತಿಗಾಗಿ ಪ್ರಸ್ತಾಪಿಸಬಹುದು ಎಂದು ಹೇಳಿದರು.

 ವಿನಾಯಕ ದಾಮೋದರ ಸಾವರ್ಕರ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರವಾಗಿರುವ ಭಾರತ ರತ್ನವನ್ನು ಪ್ರದಾನಿಸುವಂತೆ ಕೇಂದ್ರದ ಎನ್‌ಡಿಎ ಸರಕಾರವನ್ನು ಪಕ್ಷವು ಕೋರಲಿದೆ ಎಂದು ಮಹಾರಾಷ್ಟ್ರ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದೆ.

“ಇದು ನಮ್ಮ ಕಾಲದ ಅತ್ಯಂತ ದೊಡ್ಡ ವ್ಯಂಗ್ಯವಾಗಿದೆ. ನಾವೆಲ್ಲ ಗಾಂಧಿ ಜಯಂತಿಯನ್ನು ಆಚರಿಸುತ್ತಿದ್ದರೆ ಬಿಜೆಪಿಯು ಗಾಂಧಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಾವರ್ಕರ್‌ಗೆ ಭಾರತ ರತ್ನ ಪ್ರಶಸ್ತಿ ದೊರೆಯಬೇಕೆಂದು ಬಯಸುತ್ತಿದೆ” ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಿದ್ದ ರಾಜಾ ಹೇಳಿದರು.

 ಅ.21ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ 288 ಸ್ಥಾನಗಳ ಪೈಕಿ 16ರಲ್ಲಿ ಸಿಪಿಐ ಸ್ಪರ್ಧಿಸಿದೆ.

ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳನ್ನು ಸೋಲಿಸುವುದು ನಮ್ಮ ಪ್ರಮುಖ ಗುರಿಯಾಗಿದೆ. ಇತರ ಕೇತ್ರಗಳಲ್ಲಿ ಸಿಪಿಎಂ ಮತ್ತು ಇತರ ಪ್ರತಿಪಕ್ಷಗಳನ್ನು ನಾವು ಬೆಂಬಲಿಸುತ್ತಿದ್ದೇವೆ ಎಂದು ರಾಜಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News