×
Ad

ಕೆಲಸದ ನೆಪದಲ್ಲಿ ಹೊಟೇಲ್ ಗೆ ಕರೆಸಿ ಬಿಜೆಪಿ ಶಾಸಕನಿಂದ ಅತ್ಯಾಚಾರ: ವೈದ್ಯೆಯ ಆರೋಪ

Update: 2019-10-15 21:52 IST

ಅರುಣಾಚಲ ಪ್ರದೇಶ, ಅ.15: ಇಲ್ಲಿನ ಇಟಾನಗರದ ಹೊಟೇಲ್ ನಲ್ಲಿ ಬಿಜೆಪಿ ಶಾಸಕನೊಬ್ಬ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ವೈದ್ಯೆಯೊಬ್ಬರು ಆರೋಪಿಸಿದ್ದಾರೆ. ಈ ಬಗ್ಗೆ ಯಾರ ಬಳಿಯೂ ಮಾತನಾಡಬಾರದು ಎಂದು ಬೆದರಿಕೆಯೊಡ್ಡಿದ್ದಾಗಿ ಅವರು ದೂರಿದ್ದಾರೆ.

ಮಹಿಳೆಯ ದೂರಿನ ಹಿನ್ನೆಲೆಯಲ್ಲಿ ಇಟಾನಗರ ಪೊಲೀಸರು ಬಾಮೆಂಗ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಗುರುಕ್ ಪೋರ್ದುಂಗ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಪ್ರತಿದೂರು ನೀಡಿರುವ ಶಾಸಕ ಮಹಿಳೆಯು ತಾನಾಗಿಯೇ ಹೊಟೇಲ್ ಗೆ ಬಂದಿದ್ದಳು ಮತ್ತು ಸಮ್ಮತಿಯ ಲೈಂಗಿಕ ಕ್ರಿಯೆ ನಡೆದಿತ್ತು ಎಂದು ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಪೆಮಾ ಖಂಡು ಮತ್ತು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರ ಆಪ್ತನಾಗಿರುವ ಶಾಸಕ ಗುರುಕ್ ಬಾಮೆಂಗ್ ನಲ್ಲಿರುವ ಆರೋಗ್ಯ ಕೇಂದ್ರದ ಕೆಲಸಗಳ ಬಗ್ಗೆ ಚರ್ಚಿಸಲಿದೆ ಎಂದು ತನ್ನನ್ನು ಹೊಟೇಲ್ ಗೆ ಕರೆಸಿದ್ದರು. ತಾನು ಹೊಟೇಲ್ ಕೋಣೆ ಪ್ರವೇಶಿಸುತ್ತಿದ್ದಂತೆ ಆತ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News