ಅಯೋಧ್ಯೆ ಪ್ರಕರಣ ಬುಧವಾರ ಕೊನೆಯ ವಿಚಾರಣೆ: ಸಿಜೆಐ

Update: 2019-10-15 17:40 GMT

ಹೊಸದಿಲ್ಲಿ, ಅ. 15: ರಾಮಮಂದಿರ-ಬಾಬರಿ ಮಸೀದಿ ಭೂ ಒಡೆತನ ವಿವಾದದ 40ನೇ ಹಾಗೂ ಕೊನೆಯ ದಿನದ ವಿಚಾರಣೆ ಬುಧವಾರ ನಡೆಯಲಿದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ಆಲಿಕೆ ನಡೆಸಿದ ನ್ಯಾಯಮೂರ್ತಿ ಗೊಗೊಯಿ, ‘‘ಇಂದು 39ನೇ ದಿನದ ವಿಚಾರಣೆ. ನಾಳೆ 40ನೇ ದಿನದ ವಿಚಾರಣೆ. ಇದು ಈ ಪ್ರಕರಣದ ಕೊನೆಯ ದಿನದ ವಿಚಾರಣೆ’’ ಎಂದರು. ಅಯೋಧ್ಯೆಯಲ್ಲಿರುವ 2.77 ಎಕರೆ ವಿವಾದಿತ ಭೂಮಿಯನ್ನು ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರ ಹಾಗೂ ರಾಮಲಲ್ಲಾಗೆ ಸಮಾನವಾಗಿ ವಿಭಜಿಸಿ ನೀಡಬೇಕು ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯ 2010ರಲ್ಲಿ ನೀಡಿದ ತೀರ್ಪು ಪ್ರಶ್ನಿಸಿ ಸಲ್ಲಿಲಾದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಗೊಗೊಯಿ ನೇತೃತ್ವದ ಐವರು ಸದಸ್ಯರ ಪೀಠ ವಿಚಾರಣೆ ನಡೆಸುತ್ತಿದೆ.

ನಿಗದಿತ ದಿನಾಂಕಕ್ಕಿಂತ ಒಂದು ದಿನ ಮೊದಲು ಅಂದರೆ, ಅಕ್ಟೋಬರ್ 17ರಂದು ವಿಚಾರಣೆ ಪೂರ್ಣಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೇಳಿತ್ತು. ಈ ಪ್ರಕರಣದ ತೀರ್ಪು ನವೆಂಬರ್ 4 ಅಥವಾ 5ರಂದು ಹೊರಬೀಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News