ಕಾಸರಗೋಡು : ಅಡ್ಕತ್ತಬೈಲ್ ನಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ

Update: 2019-10-16 03:46 GMT

ಕಾಸರಗೋಡು  :   ರಾಷ್ಟೀಯ   ಹೆದ್ದಾರಿಯ  ಅಡ್ಕತ್ತಬೈಲ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ  ಗ್ಯಾಸ್ ಟ್ಯಾಂಕರ್  ಮಗುಚಿ ಬಿದ್ದ ಘಟನೆ  ಬುಧವಾರ ಬೆಳಗ್ಗೆ ನಡೆದಿದೆ.

ಟ್ಯಾಂಕರ್  ನಿಂದ ಅನಿಲ ಸೋರಿಕೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಪರಿಸರವಾಸಿಗಳಿಗೆ  ಮುನ್ನೆಚ್ಚರಿಕೆ ನೀಡಲಾಗಿದೆ.

ವಿದ್ಯುತ್ ಸಂಪರ್ಕ  ಕಡಿತಗೊಳಿಸಲಾಗಿದೆ.  ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಸೋರಿಕೆ ತಡೆಯಲು ಪ್ರಯತ್ನಿಸುತ್ತಿದ್ದಾರೆ.
ಅಪಘಾತದ ಹಿನ್ನೆಲೆಯಲ್ಲಿ  ಕಾಸರಗೋಡು - ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ  ಸಂಚಾರ ಸ್ಥಗಿತಗೊಂಡಿದೆ.

ವಾಹನಗಳು ಬದಲಿ ರಸ್ತೆಯಾಗಿ  ಸಂಚರಿಸುತ್ತಿವೆ . ಮಂಗಳೂರಿನಿಂದ ಕಾಸರಗೋಡು ಕಡೆಗೆ ಹೋಗುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಮಗುಚಿ ಬಿದ್ದಿದೆ.

ಗ್ಯಾಸ್ ಟ್ಯಾಂಕರ್ ಅಪಘಾತದ ಹಿನ್ನೆಲೆಯಲ್ಲಿ  ಅಡ್ಕತ್ತಬೈಲ್ ಶಾಲೆಗೆ ಇಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News