ದರ್ಬೆ: ಅ. 17ರಂದು ‘ಯುನೈಟೆಡ್ ಹೋಂ ಡೆಕೋರ್’ ಶುಭಾರಂಭ

Update: 2019-10-16 07:04 GMT

ಪುತ್ತೂರು :  ‘ಯುನೈಟೆಡ್ ಹೋಂ ಡೆಕೋರ್’ ಅ. 17ರಂದು ಪುತ್ತೂರಿನ ದರ್ಬೆ ಸರ್ಕಲ್ ಸಮೀಪದ ರಹಿಮ್ಸ್ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಳ್ಳಲಿದೆ.

ಮಳಿಗೆಯನ್ನು ಸೈಯದ್ ಕೆ.ಎಸ್ ಅಲೀ ತಂಙಳ್ ಕುಂಬೋಳ್ ಉದ್ಘಾಟಿಸಲಿದ್ದಾರೆ. ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಆಶ್ಕೋ ಗ್ರೂಪ್ ಆಫ್ ಕಂಪನೀಸ್ ಝಾಂಬಿಯಾ ಇದರ ಸಿಇಒ ಡಾ.ಅಶ್ರಫ್ ಕಮ್ಮಾಡಿ, ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಬಡಗನ್ನೂರು, ಎಂಪವರ್ ಪ್ರಾಪರ್ಟೀಸ್‌ನ ಮೆನೇಜಿಂಗ್ ಡೈರೆಕ್ಟರ್ ಅಬ್ದುಲ್ ಲತೀಫ್, ಆರ್ಯಾಪು ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ಎಚ್ ಮಹಮ್ಮದ್ ಆಲಿ, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೇಮ್ಸ್ ಮಾಡ್ತಾ, ಪೆಟ್ರೋಲಿಯಂ ವರ್ತಕರ ಸಂಘದ ದ.ಕ ಜಿಲ್ಲಾಧ್ಯಕ್ಷ ವಾಮನ್ ಪೈ, ಜಯಕರ್ನಾಟಕ ಪುತ್ತೂರು ಇದರ ಕಾರ್ಯಾಧ್ಯಕ್ಷ ಪ್ರಸನ್ನ ಕುಮಾರ್ ಶೆಟ್ಟಿ, ಮೇನಾಲ ಮಧುರ ಇಂಟರ್‌ನ್ಯಾಶನಲ್ ಸ್ಕೂಲ್‌ನ ನಿರ್ದೇಶಕ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಕಿರಣ್ ಎಂಟರ್‌ಪ್ರೈಸಸ್‌ನ ಕೇಶವ ನಾಯಕ್ ಎಂ, ವಕೀಲ ಸಾಹಿರಾ ಝುಬೇರ್, ಜೆಡಿಎಸ್ ಪುತ್ತೂರು ತಾಲೂಕು ಅಧ್ಯಕ್ಷ ಅಶ್ರಫ್ ಕಲ್ಲೇಗ ಮೊದಲಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಆಡಳಿತ ಪಾಲುದಾರರು ತಿಳಿಸಿದ್ದಾರೆ.

ಮಳಿಗೆಯಲ್ಲಿ ಸೋಫಾ, ಕಪಾಟು, ಡೈನಿಂಗ್ ಟೇಬಲ್, ಟೀ ಟೇಬಲ್, ಬೆಡ್ ರೂಂ ಇಂಟೀರಿಯರ್, ವಾಲ್ ಪೇಪರ್, ಕಿಚನ್ ಇಂಟಿರಿಯರ್, ವಾಲ್ ಕ್ಲಾಡಿಂಗ್, ಕರ್ಟೆನ್ಸ್ ಹಾಗೂ ಇನ್ನಿತರ ಆಧುನಿಕ ಶೈಲಿಯ ಗೃಹೋಪಯೋಗಿ ಪೀಠೋಪಕರಣಗಳು ಇವೆ. ನಿಮ್ಮ ಮನಸಿಗೊಪ್ಪುವ ಸಾಮಾಗ್ರಿಗಳನ್ನು ಕಂತುಗಳ ಮೂಲಕ ಹಣ ಪಾವತಿಸಿ ಪಡೆದುಕೊಳ್ಳಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News