ಅ. 18ರಿಂದ ಶ್ರೀನಿವಾಸ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಟ್ಟದ ನ್ಯಾನೋ ತಂತ್ರಜ್ಞಾನ ಸಮ್ಮೇಳನ

Update: 2019-10-16 10:28 GMT

ಮಂಗಳೂರು, ಅ.16;ನಗರದ ಶ್ರೀ ನಿವಾಸ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಟ್ಟದ ನ್ಯಾನೋ ತಂತ್ರಜ್ಞಾನದ ಸಮ್ಮೇಳನ ಅ. 18ಮತ್ತು 19ರಂದು ನಡೆಯಲಿದೆ ಎಂದು ಶ್ರೀನಿವಾಸ ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ಪಿ.ಎಸ್. ಐತಾಳ್  ತಿಳಿಸಿದ್ದಾರೆ.

ಸಮ್ಮೇಳನ ವನ್ನು ಮಂಗಳೂರು ವಿಶ್ವವಿ ದ್ಯಾನಿಲಯದ  ವಿಶ್ರಾಂತ ಕುಲಪತಿ ಮತ್ತು ಆದಿ ಚುಂಚನಗಿರಿ ವಿಶ್ವ ವಿದ್ಯಾನಿಲಯದ ಸಹ ಕುಲಾಧಿಪತಿ ಡಾ. ಭೈರಪ್ಪ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿ ಗಳಾಗಿ ಕೊಚ್ಚಿನ್ ವಿಶ್ವವಿದ್ಯಾಲಯ ದ ಪ್ರೊ.ಡಾ. ವಿ.ಪಿ.ಎನ್. ನಾಂಪುರಿ, ಡಾ. ಪ್ರಶಾಂತ ಕೆ.ಫ್ರಾನ್ಸ್, ಚೆನ್ನೈ ಯ ಪೇಟೆಂಟ್ ಆಫೀಸರ್ ಪ್ರಸಾದ್ ರಾವ್, ನ್ಯಾನೊ ತಂತ್ರಜ್ಞಾನ ದಲ್ಲಿ ತೊಡಗಿ ರುವ ಡಾ.ಕಿರಣ್ ಮಂಜಪ್ಪ ತೈವಾನ್ , ಡಾ.ಮನೋಜ್ ಕ್ರಷ್ಣ ಬಿಎಎಸ್ ಎಫ್, ಶ್ರೀನಿವಾಸ ವಿಶ್ವ ವಿದ್ಯಾನಿಲಯದ ಕುಲಾಧಿಪತಿ ಸಿ.ಎ.ರಾಘವೇಂದ್ರ ರಾವ್ ,ಸಹ ಕುಲಾಧಿಪತಿ ಡಾ.ಎ.ಶ್ರೀನಿವಾಸರಾವ್, ಡಾ ಪ್ರಭಾವತಿ ರಾವ್ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ತಂತ್ರಜ್ಞಾನ ಮಂಡಳಿಯ ವಿವೇಕ್ ಆನಂದ್ ಮೊದಲಾದ ವರು ಭಾಗವಹಿ ಸಲಿದ್ದಾರೆ.

ಸಮ್ಮೇಳನದಲ್ಲಿ ಸುಮಾರು  250 ಪ್ರತಿನಿಧಿ ಗಳು ಭಾಗವಹಿಸಿ ಸುಮಾರು 150 ಸಂಶೋಧನಾ ವರದಿಗಳನ್ನು ಮಂಡಿಸಲಿ ದ್ದಾರೆ ಎಂದು ಡಾ.ಐತಾಳ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಸಂಚಾಲಕ ಡಾ.ಪ್ರವೀಣ್,ಶ್ರೀನಿವಾಸ ಕಾಲೇಜಿನ ಡೀನ್  ಡಾ.ಥಾಮಸ್ ಪಿಂಟೋ, ಕುಲಸಚಿವ ಡಾ. ಅನಿಲ್ ಕುಮಾರ್, ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News