ಸಾವರ್ಕರ್‌ಗಲ್ಲ, ಕಾಂಶೀರಾಮ ಅವರಿಗೆ ಭಾರತರತ್ನ ಪ್ರದಾನಿಸಿ: ಬಿಎಸ್‌ಪಿ ನಾಯಕ

Update: 2019-10-16 15:25 GMT

ಹೊಸದಿಲ್ಲಿ,ಅ.16: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಾಗಿ ತನ್ನ ಪ್ರಣಾಳಿಕೆಯಲ್ಲಿ ವಿ.ಡಿ.ಸಾವರ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಸೂಚಿಸಿರುವುದಕ್ಕಾಗಿ ಬುಧವಾರ ಬಿಜೆಪಿಯನ್ನು ತರಾಟೆಗೆತ್ತಿಕೊಂಡ ಬಿಎಸ್‌ಪಿ ವಕ್ತಾರ ಸುಧೀಂದ್ರ ಭದೋರಿಯಾ ಅವರು,ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಕ್ಷದ ಸ್ಥಾಪಕ ಕಾಂಶೀರಾಮ ಅವರಿಗೆ ಪ್ರದಾನಿಸಬೇಕು ಎಂದು ಹೇಳಿದರು.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು,ದಲಿತರಿಗಾಗಿ ಶ್ರಮಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಎಂದಿಗೂ ಸಾವರ್ಕರ್ ಪರವಾಗಿರಲಿಲ್ಲ. ಬಿಜೆಪಿಯು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭಾರತ ರತ್ನ ಪ್ರಶಸ್ತಿಗಾಗಿ ಸಾವರ್ಕರ್ ಹೆಸರನ್ನು ಪ್ರಸ್ತಾಪಿಸಿದೆ. ಭಾರತ ರತ್ನ ಪ್ರಶಸ್ತಿಯನ್ನು ರಾಜಕೀಯಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎನ್ನುವುದನ್ನು ಇದು ತೋರಿಸುತ್ತಿದೆ ಎಂದರು.

ಸರಕಾರವು ಕಾಂಶೀರಾಮ ಅವರಿಗೆ ಮೊದಲು ಭಾರತ ರತ್ನ ಪ್ರಶಸ್ತಿಯನ್ನು ನೀಡಬೇಕು ಎನ್ನುವುದು ಪಕ್ಷದ ಮತ್ತು ದೇಶದ ಜನರ ಬೇಡಿಕೆಯಾಗಿದೆ. ಅವರು ದಲಿತರು,ಒಬಿಸಿಗಳು ಮತ್ತು ಶೋಷಿತ ವರ್ಗಗಳಲ್ಲಿ ಜಾಗ್ರತಿಯನ್ನು ಮೂಡಿಸಿದ್ದರು ಎಂದು ಭದೋರಿಯಾ ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News