ಉಡುಪಿ ಪರಿಸರದಲ್ಲಿ ಅಪರೂಪದ ‘ಹೂವಿನಕೋಲು’

Update: 2019-10-16 16:16 GMT

ಉಡುಪಿ, ಅ.16: ನವರಾತ್ರಿಯ ಸಂದರ್ಭದಲ್ಲಿ ಬ್ರಹ್ಮಾವರದಿಂದ ಕುಂದಾಪುರದವರೆಗೆ ಹಿಂದೆಲ್ಲಾ ವ್ಯಾಪಕವಾಗಿ, ಇಂದು ಅಪರೂಪಕ್ಕೆಂಬಂತೆ ಕಂಡುಬರುತ್ತಿರುವ ಯಕ್ಷಗಾನದ ಒಂದು ಕಿರು ಪ್ರಕಾರವೇ ‘ಹೂವಿನಕೋಲು’. ಈ ಬಾರಿ ಎರಡು ದಿನಗಳ ಕಾಲ ಉಡುಪಿಯಲ್ಲಿ ಪ್ರದರ್ಶನಗೊಂಡಿತು.

ಉಡುಪಿಯ ಸ್ಥಾನಿಕ ಬ್ರಾಹ್ಮಣ ಸಂಘದ ಆಶ್ರಯದಲ್ಲಿವಿಶ್ರಾಂತ ಉಪನ್ಯಾಸಕ, ಹರಿದಾಸ ಮ.ನಾ.ಹೆಬ್ಬಾರರ ನೇತೃತ್ವದಲ್ಲಿ ಇಂತಹ ‘ಹೂವಿನಕೋಲು’ ತಂಡ ಕುಂಜಿಬೆಟ್ಟಿನ ಶ್ರೀಶಾರದಾ ದೇವಸ್ಥಾನದ ನವರಾತ್ರಿ ಉತ್ಸವದ ಸಂದರ್ಭದಲ್ಲಿ ಪ್ರತಿದಿನ ಸಂಜೆ ನಡೆಯುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರುಗಳೊಂದಿಗೆ ಪ್ರದರ್ಶನ ನೀಡಿತು.

ಉಡುಪಿಯ ಸ್ಥಾನಿಕ ಬ್ರಾಹ್ಮಣ ಸಂಘದ ಆಶ್ರಯದಲ್ಲಿವಿಶ್ರಾಂತ ಉಪನ್ಯಾಸಕ, ಹರಿದಾಸ ಮ.ನಾ.ಹೆಬ್ಬಾರರ ನೇತೃತ್ವದಲ್ಲಿ ಇಂತಹ ‘ಹೂವಿನಕೋಲು’ ತಂಡ ಕುಂಜಿಬೆಟ್ಟಿನ ಶ್ರೀಶಾರದಾ ದೇವಸ್ಥಾನದ ನವರಾತ್ರಿ ಉತ್ಸವದ ಸಂದರ್ದಲ್ಲಿಪ್ರತಿದಿನಸಂಜೆನಡೆಯುವವಿವಿ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪ್ರದರ್ಶನ ನೀಡಿತು. ಸಾಮಾನ್ಯವಾಗಿ ಚಿಕ್ಕ ಮಕ್ಕಳಿಗೆ ಯಕ್ಷಗಾನ ಕಲೆಯ ಅಭಿರುಚಿ ಹುಟ್ಟುವಂತೆ ಮಾಡುವ ಹಾಗೂ ಮುಂದೆ ಅವರು ಯಕ್ಷಗಾನ ಕಲಾವಿದರಾಗಲು ಸ್ಪೂರ್ತಿ ನೀಡಲು, ಯಕ್ಷಗಾನ ಬಯಲಾಟ ಮೇಳಗಳಲ್ಲಿ ತೊಡಗಿಸಿಕೊಂಡ ಹಿರಿಯ ಕಲಾವಿದರು ಚುರುಕಿನ ಕಿರಿಯ ಮಕ್ಕಳನ್ನು ನವರಾತ್ರಿಯ ಸಂದರ್ಭದಲ್ಲಿ ಅದಕ್ಕಾಗಿಯೇ ಇರುವ ‘ಚೌಪದ’ವನ್ನೂ ಯಕ್ಷಗಾನದ ಸಂಭಾಷಣೆಯನ್ನೂ ಬರೆಸಿ ಕಲಿಸಿ, ಯಕ್ಷಗಾನ ಹಿಮ್ಮೇಳದೊಂದಿಗೆ ದೇವರಗುಡಿಯಿಂದ ಪ್ರಾರಂಭಿಸಿ, ಮನೆ ಮನೆಗಳಲ್ಲಿ ತಿರುಗಾಟ ಮಾಡುವ ಸಂಪ್ರದಾಯವೊಂದು ಉಡುಪಿಯ ಉತ್ತರ ಭಾಗದಲ್ಲಿ ಪ್ರಚಲಿತದಲ್ಲಿದೆ. ಇದೇ ಹೂವಿನ ಕೋಲು.

‘ನಾರಾಯಣಾಯ: ನಮೋ ನಾರಾಯಣಾಯ:’ ಎಂಬ ಸಾಂಪ್ರದಾಯಿಕ ಚೌಪದದ ನಂತರ ಯಾವುದಾದರೊಂದು ಯಕ್ಷಗಾನ ಪ್ರಸಂಗದ 3-4 ಪದ್ಯಗಳನ್ನು ಭಾಗವತರು ಹೇಳುತ್ತಲೇ ಅರ್ಥದಾರಿ ಬಾಲಕರು ಆ ಪದ್ಯಕ್ಕೆ ಯಕ್ಷಗಾನ ಶೈಲಿಯಲ್ಲಿ ಅರ್ಥ ಹೇಳುವುದೇ ‘ಹೂವಿನಕೋಲು’ ಪ್ರಕಾರದ ವೈಶಿಷ್ಟ. ಚೌಪದದಲ್ಲಿದ್ದಂತೆ ಬಾಲಕರು ಬಂದು ಮನೆ ಮಂದಿಯನ್ನು ಹರಸುವುದಲ್ಲದೆ, ಬಾಲಕರು ಯಕ್ಷಗಾನ ಕಲಾಪ್ರಕಾರದ ಅಧ್ಯಯನವನ್ನೂ ಮಾಡಲು ಸಾಧ್ಯವಾಗುವ ಈ ವಿಶಿಷ್ಟ ಹೂವಿನಕೋಲು, ಜನರಿಗೆ ಮನರಂಜನೆ ಯನ್ನೂ ನೀಡುವ ಕಲಾತಂಡವಾಗಿರುತ್ತದೆ. 70-80ರ ದಶಕಗಳವರೆಗೆ ನವರಾತ್ರಿಯ ಸಂದರ್ಭದಲ್ಲಿ ಹೂವಿನಕೋಲು ಮನೆಮನೆಗೆ ತೆರಳಿ ಪ್ರದರ್ಶನ ನೀಡುತ್ತಿತ್ತು.

ಒಂದೇ ರೀತಿಯ ಸಮವಸ್ತ್ರದಂತೆ ಉಡುಪು ತೊಟ್ಟು ಕೈಯಲ್ಲಿ ಬಣ್ಣಬಣ್ಣದ ಕಾಗದಗಳಿಂದ ಸಿಂಗರಿಸಿದ ‘ಹೂವಿನಕೋಲಿ’ನ ಗುಚ್ಚ ಹಿಡಿದು ಬರುವ ಬಾಲಕರು ಅದನ್ನು ತಮ್ಮ ಎದುರಿನಲ್ಲಿರಿಸಿ ಯಕ್ಷಗಾನ ಕೂಟಕ್ಕೆ ಅರ್ಥಧಾರಿಗಳು ಎದುರುಬದುರಾಗಿ ಕುಳಿತುಕೊಳ್ಳುವಂತೆ ಕುಳಿತು ಭಾಗವತರು ಹಾಡಿದ ಹಾಡಿಗೆ ಅರ್ಥ ಹೇಳುವರು. ಹೀಗೆ ಒಂದು ಮನೆಯಿಂದ ಮತ್ತೊಂದು ಮನೆಗೆ ಸಾಗುತ್ತಾ ನವರಾತ್ರಿಯ 9 ದಿನಗಳಲ್ಲಿ ತಿರುಗಾಟವನ್ನು ಮಾಡುವರು.

ಈ ಬಾರಿ ಉಡುಪಿಯಲ್ಲಿ ಕೇವಲ ಎರಡು ದಿನ ಮಾತ್ರ ‘ಹೂವಿನಕೋಲು’ ಕಲೆಯನ್ನು ಪ್ರದರ್ಶಿಸಲಾಯಿತು. ಭಾಗವತರಾಗಿ ಪ್ರವೀಣ್ ಕುಮಾರ್ ನಂದಳಿಕೆ ಮತ್ತು ಹರಿದಾಸ ಮ.ನಾ.ಹೆಬ್ಬಾರ್, ಮದ್ದಳೆವಾದಕರಾಗಿ ಕೃಷ್ಣ ಸಂತೆಕಟ್ಟೆ, ಅರ್ಥಧಾರಿ ವಿದ್ಯಾರ್ಥಿಗಳಾಗಿ ಆದಿತ್ಯ ಸಂತೋಷ್ ರಾವ್, ಸ್ಕಂದ ವಿಶ್ವನಾಥ್ ಶ್ಯಾನುಭೋಗ್, ವ್ನಿೇಶ್ ದಿವಾಕರ್ ರಾವ್ ಮತ್ತು ಸ್ಕಂದ ಸಂತೋಷ್ ರಾವ್ ಭಾಗವಹಿಸಿದ್ದರು. ಕರ್ಣಾರ್ಜುನ ಕಾಳಗ, ದ್ರೌಪದೀ ಪ್ರತಾಪ, ಸುಧನ್ವಾರ್ಜುನ ಕಾಳಗ, ಪಂಚವಟಿ ಪ್ರಸಂಗಗಳ ಆಯ್ದ ಪದ್ಯಗಳಿಗೆ ಇವರು ಅರ್ಥ ಹೇಳಿದರು.

ಮಟ್ಟು ಕೃಷ್ಣಕುಮಾರ್ ರಾವ್, ಟಿ ವಿಶ್ವನಾಥ್ ಶ್ಯಾನುಭಾಗ್, ಚೊಕ್ಕಾಡಿ ದಿವಾಕರ ರಾವ್ ಅವರ ಪ್ರಯತ್ನದಿಂದ ಹೂವಿನಕೋಲು ಕಲಾಪ್ರಕಾರದ ಪರಿಚಯ ಉಡುಪಿಯ ಜನತೆಗೆ ದೊರೆಯುವಂತಾಯಿತು. ಇದಕ್ಕೆ ಕುಂಜಿಬೆಟ್ಟು ಸ್ಥಾನಿಕ ಬ್ರಾಮಣ ಸಂಘ ಕಾರಣವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News