ಹಳೆಕೋಟೆ ಸಂಘಸಂಸ್ಥೆಗಳ ಒಕ್ಕೂಟದಿಂದ ಸಂವಾದ ಕಾರ್ಯಕ್ರಮ

Update: 2019-10-17 05:16 GMT

ಮಂಗಳೂರು: ಯೆನೆಪೊಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ದೇರಳಕಟ್ಟೆ, ಹಳೆಕೋಟೆ ಸಂಘಸಂಸ್ಥೆಗಳ ಒಕ್ಕೂಟ, ಸ್ಪಂದನ ಸೋಷಿಯಲ್ ಗ್ರೂಪ್ ಉಳ್ಳಾಲ ಸಹಯೋಗದೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಳ್ಳಾಲ ದರ್ಗಾ ಪ್ರಧಾನ ಕಾರ್ಯದರ್ಶಿ, ಹಳೆಕೋಟೆ ಮಸೀದಿ ಅಧ್ಯಕ್ಷ ಹಾಜಿ ತ್ವಾಹ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ನಾಗರಾಜ್ ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳ ಮಾಹಿತಿಯನ್ನು ನೀಡಿದರು.

ಯೆನೆಪೊಯ ಆಸ್ಪತ್ರೆಯ ವಿವಿಧ ಯೋಜನೆಯ ಬಗ್ಗೆ ವಿಜಯಾನಂದರವರು ಮಾಹಿತಿ ನೀಡಿದರು. ಈ ಸಂಧರ್ಭ ಡಾ. ಸಾಬಿತ್ ಕ್ಯಾಂಪ್ ಸಂಯೋಜಕರಾದ ಅಬ್ದುಲ್ ರಝಾಕ್, ಹಳೆಕೋಟೆ ಮಸೀದಿ ಕಾರ್ಯದರ್ಶಿ ಅಬ್ದುಲ್ ರವೂಫ್, ಕೌನ್ಸಿಲರ್ ಅಸ್ಗರ್ ಅಲಿ, ಸ್ಪಂದನ ಸೋಷಿಯಲ್‌ ಗ್ರೂಪ್ ಕಾರ್ಯದರ್ಶಿ ಜಮಾಲ್, ಅಲ್ತಾಫ್ ಯು.ಎಚ್, ಕೆ.ಎಂ‌.ಕೆ ಮಂಜನಾಡಿ, ಇಸ್ಮಾಯಿಲ್ ಹಾಜಬ್ಬ, ಎಂ.ಎಚ್ ಇಬ್ರಾಹಿಂ, ಕರೀಮಾಕ, ಟೆಸ್ಟ್ ಸ್ಪೋರ್ಟ್ಸ್ ಅಧ್ಯಕ್ಷ ಅಬ್ದುಲ್ ರಹ್ಮಾನ್, ಗೌರವಾಧ್ಯಕ್ಷ ರಫೀಕ್, ಶಬೀರ್ ಹಸನ್, ಪ್ರವೀಣ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಲ್ಯಾಸ್ ಹಾಜಬ್ಬ, ಶಮೀರ್ ಹಾಗೂ ಸದಸ್ಯರು, ಡ್ರೀಮ್ಸ್ ಇಂಡಿಯಾ ಫೌಂಡೇಶನ್ ಸಂಚಾಲಕ ಸಫ್ವಾನ್, ರಹೀಮ್, ಇಕ್ರಾ ಚಾರಿಟೇಬಲ್ ಟ್ರಸ್ಟ್  ಅಧ್ಯಕ್ಷ ಫಾರೂಕ್, ಕಿಂಗ್ಸ್ ಹಳೆಕೋಟೆಯ ಸದಸ್ಯರು, ಇಕ್ಬಾಲ್, ಹಂಝ, ಸಲೀಮ್, ಅಸ್ಫಾಕ್, ಸಿದ್ದೀಕ್ ಕುಂಪಲ, ರಹ್ಮತ್, ಅಝೀಝ್ ಸಂತೋಷ್ ನಗರ, ಹಮ್ಮಿಯಾಕ, ರಫೀಕ್ ಒನ್ ಮೊಬೈಲ್, ಶಾಫಿ ಇಶಾಂ, ಇಕ್ಬಾಲ್ ಕೋಟೆಪುರ, ಹಕೀಮ್, ಪಾಝಿಲ್ ಮೊದಲಾದವರು ಉಪಸ್ಥಿತರಿದ್ದರು.

 ಕಾರ್ಯಕ್ರಮದಲ್ಲಿ ತಾಹ ಹಾಜಿಯವರ ಮೂಲಕ ಹಳೆಕೋಟೆ ಸಂಘಸಂಸ್ಥೆಗೆ ಯೆನ್‌ಸಹಯೋಗ್ ಕಾರ್ಡನ್ನು ಯೇನಪೋಯ ಮೆಡಿಕಲ್ ಕಾಲೇಜ್ ಅಧೀಕ್ಷಕರಾದ ಡಾ‌ ನಾಗರಾಜ್ ಹಸ್ತಾಂತರಿಸಿದರು.ಮೊಹಮ್ಮದ್ ಫೈರೋಝ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಕೊನೆಗೆ ರಝಾಕ್‌ರವರು ಧನ್ಯವಾದ ಮಾಡಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News