ಮಂಗಳೂರು: ಗೇರು ಬೆಳೆಯನ್ನು ತೋಟಗಾರಿಕಾ ಬೆಳೆಯಾಗಿ ಪರಿಗಣಿಸಲು ಕೆಸಿಸಿಐ ಆಗ್ರಹ

Update: 2019-10-17 10:29 GMT

ಮಂಗಳೂರು: ಗೇರು ಬೆಳೆಯನ್ನು ತೋಟಗಾರಿಕಾ ಬೆಳೆಯಾಗಿ (ಪ್ಲಾಂಟೇಶನ್ ಕ್ರಾಫ್) ಪರಿಗಣಿಸಿ ಎಪಿಎಂಸಿ ಕಾಯ್ದೆಯಿಂದ ಹೊರಗಿಡಬೇಕು. ಗೇರು ಉದ್ಯಮವನ್ನು ಉಳಿಸಿ ಪರ್ಯಾಯ ಕ್ರಮಗಳನ್ನು ಸರಕಾರ  ತೆಗೆದುಕೊಳ್ಳಬೇಕಾಗಿದೆ ಎಂದು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಯ ಅಧ್ಯಕ್ಷ ಐಸಾಕ್ ವಾಸ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಪ್ರಸಕ್ತ ಗೇರು ಬೆಳೆಯನ್ನು ಕ್ರಷಿ ಉತ್ಪನ್ನ ವಾಗಿ ಪರಿಗಣಿಸಿ ಎಪಿಎಂಸಿಯ ಮೂಲಕ 1.5 ಶೇ ಮಾರಾಟ ತೆರಿಗೆಯನ್ನು ವಿಧಿಸಲಾ ಗುತ್ತದೆ. ದೇಶದ ಗೇರು‌ಬೀಜದ ಕಾರ್ಖಾನೆಗಳು ಕಾರ್ಖಾನೆ ಗೆ ಬೇಕಾಗುವ ಗೇರು ಬೀಜವನ್ನು ಹೊರಗಿನ ಆಪ್ರಿಕಾ ದೇಶದಿಂದ ಆಮದು ಮಾಡಿಕೊಳ್ಳುತ್ತಿವೆ. ದೇಶದದಲ್ಲಿ ಕಚ್ಚಾ  ಗೇರುಬೀಜದ ಉತ್ಪಾದನೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಾ ಸಾಗಿದೆ. ನಮ್ಮ ರಾಜ್ಯದ ಲ್ಲಿ 50ರಿಂದ 60ಸಾವಿರ ಮೆಟ್ರಿಕ್ ಟನ್ ಕಚ್ಚಾ ಗೇರು ಬೀಜ ಉತ್ಪಾದನೆಯಾಗುತ್ತಿದೆ ಆದರೆ ಕಾರ್ಖಾನೆ ಗೆ ಪ್ರತಿವರ್ಷ 2.5 ಲಕ್ಷ ಮೆಟ್ರಿಕ್ ಟನ್ ಕಚ್ಚಾ ಗೇರು ಬೀಜದ ಅಗತ್ಯವಿದೆ. ಈ ಹಿನ್ನೆಲೆ ಯಲ್ಲಿ 2 ಲಕ್ಷ ಮೆಟ್ರಿಕ್ ಟನ್ ಗೇರು ಬೀಜ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇದೆ.

ಈ ಬಗ್ಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ.ಗೇರು ಉದ್ಯಮಕ್ಕೆ ಕಚ್ಚಾ ಗೇರು ಬೀಜದ ಸಮಸ್ಯೆ ಉಂಟಾಗಲಿದೆ ಎಂದು ಐಸಾಕ್ ವಾಸ್ ತಿಳಿಸಿದ್ದಾರೆ.

ಜಿಲ್ಲೆಗೆ ವಾಣಿಜ್ಯ ಪ್ರಕರಣಗಳ ನ್ಯಾಯಾಲಯ:-ದಕ್ಷಿಣ ಕನ್ನಡ ಜಿಲ್ಲೆಗೆ ಸು ಮಾರು ಒಂದು ಕೋಟಿ ರೂ ವ್ಯವಹಾರ ದ ಮಿತಿಯೊಳಗಿನ  ವಾಣಿಜ್ಯ ನ್ಯಾಯಾಲ ಯವನ್ನು ನೀಡಬೇಕೆಂದು ಸರಕಾರಕ್ಕೆ ಮನವಿ ಮಾಡಲಾಗಿದೆ.ಹಲವು ವರುಷಗಳಿಂದ ತಾಲೂಕು, ಜಿಲ್ಲೆ ಹಾಗೂ ಹೈಕೋರ್ಟ್ ನಲ್ಲಿ ಇತ್ಯರ್ಥವಾಗದೆ ಉಳಿದಿರುವ ಪ್ರಕರಣಗಳನ್ನು ಈ ನ್ಯಾಯಾಲಯದ ಮೂಲಕ ಬಗೆಹರಿಸಲು ಅವಕಾಶವಾಗುತ್ತದೆ ಎಂದು ಐಸಾಕ್ ವಾಸ್ ತಿಳಿಸಿದ್ದಾರೆ.

ಕೆಸಿಸಿಐ ಉದ್ಯಮ ವ್ಯವಹಾರ ಗಳಿಗೆ ಸಂಬಂಧಿಸಿದ ವ್ಯಾಜ್ಯ ಗಳನ್ನು ಇತ್ಯರ್ಥ ಮಾಡುವ ಕೇಂದ್ರ ವನ್ನು ತೆರೆಯಲಿದೆ ಎಂದು ಐಸಾಕ್ ವಾಸ್ ತಿಳಿಸಿದ್ದಾರೆ. ನಗರದಲ್ಲಿ ಮತ್ತು ಕೈಗಾರಿಕಾ ಪ್ರದೇಶದಲ್ಲಿ ಸಂಪರ್ಕ ಹೊಂದಿದೆ ರಸ್ತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಪ್ರವಾಸೋದ್ಯಮ ಅಭಿವೃದ್ಧಿ, ನೂತನ ಕೈಗಾರಿಕಾ ವಲಯದ ಅಭಿವೃದ್ಧಿಗೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಐಸಾಕ್ ವಾಸ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ನಿಸಾರ್ ಫಕೀರ್ ಮುಹಮ್ಮದ್, ಶಶಿಧರ ಪೈ ಮಾರೂರು, ಗಣೇಶ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News