ಮಂಗಳೂರು: ಸಂತ ಅಲೋಶಿಯಸ್ ಕಾಲೇಜಿನಲ್ಲಿ ವಿಶ್ವ ಆಹಾರ ದಿನಾಚರಣೆ

Update: 2019-10-17 11:49 GMT

ಮಂಗಳೂರು, ಅ.17: ಸಂತ ಅಲೋಶಿಯಸ್ ಕಾಲೇಜಿನ ಸ್ನಾತಕೋತ್ತರ ಆಹಾರ ವಿಜ್ಞಾನ ಕಲಿಕಾ ಮತ್ತು ಸಂಶೋಧನಾ ವಿಭಾಗವು ಆಹಾರ ಸಂಸ್ಕರಣೆ ಮತ್ತು ತಾಂತ್ರಿಕತಾ ವಿಭಾಗದ ಸಹಯೋಗದೊಂದಿಗೆ ಇಂದು ಕಾಲೇಜಿನ ಸಭಾಂಗಣದಲ್ಲಿ ವಿಶ್ವ ಆಹಾರ ದಿನಾಚರಣೆಯನ್ನು ಆಯೋಜಿಸಿತ್ತು.

ಇಂಟರ್‌ನ್ಯಾಷನಲ್ ಕಾಂಪಿಟೆನ್ಸ್ ಸೆಂಟರ್ ಫಾರ್ ಒರ್ಗಾನಿಕ್ ಅಗ್ರಿಕಲ್ಚರ್ ಸಂಸ್ಥೆಯ ಉಪಾಧ್ಯಕ್ಷರಾದ ಎಚ್.ಆರ್.ಜಯರಾಮ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಅವರು, ಆಹಾರ ಕೊರತೆಯಿಂದಾಗಿ ಶೇ.3 ಜನರು ಹಸಿವೆಯಿಂದ ಬಳಲುತ್ತಿದ್ದಾರೆ. ಈಗಿನ ಆಹಾರದಲ್ಲಿ ವಿಷಕಾರಿ ಅಂಶ ಮತ್ತು ರಾಸಾಯನಿಕಗಳನ್ನು ಬಳಸಲಾಗುತ್ತಿದ್ದು, ಅದು ನಮ್ಮ ಅನಾರೋಗ್ಯಕ್ಕೆ ಮುಖ್ಯ ಕಾರಣವಾಗಿದೆ. ಆದುದರಿಂದ ನಾವು ಈ ವಿಚಾರವನ್ನು ಅರ್ಥಮಾಡಿಕೊಂಡು ಆರೋಗ್ಯಕರ ಸಾವಯವ ಕೃಷಿಯತ್ತ ಗಮನ ಹರಿಸಿ ನೈಸರ್ಗಿಕ ಆಹಾರ ಪದಾರ್ಥಗಳನ್ನು ಬಳಸಬೇಕಾಗಿದೆ ಎಂದರು.

ಬೆಂಗಳೂರಿನ ಫಲದ ಅಗ್ರೊ ರಿಸರ್ಚ್ ಫೌಂಡೇಶನ್ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕರಾದ ಸೂರ್ಯ ಶಾಸ್ತ್ರಿ ಅತಿಥಿಯಾಗಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ರೆ.ಡಾ.ಪ್ರವೀಣ್ ಮಾರ್ಟಿಸ್ ಎಸ್.ಜೆ. ಅಧ್ಯಕ್ಷತೆ ವಹಿಸಿದ್ದರು.

ಡಿ.ಡಿ.ಯು.ಕೌಶಲ ಕೇಂದ್ರದ ನಿರ್ದೇಶಕರಾದ ಡಾ.ರಿಚರ್ಡ್ ಗೊನ್ಸಾಲ್ವಿಸ್, ಆಹಾರ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ರಾಘವೇಂದ್ರ, ಉಪನ್ಯಾಸಕ ಡಾ. ಆದರ್ಶ್ ಗೌಡ ಮತ್ತು ಕಾರ್ಯಕ್ರಮ ಸಂಯೋಜಕಿ ಶಿಲ್ಪಲೇಖರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಅಧೀನ ಕಾಲೇಜುಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕುಲಸಚಿವ ಡಾ.ಎ.ಎಂ.ನರಹರಿ, ಪರೀಕ್ಷೆಗಳ ನಿಯಂತ್ರಕರಾದ ಆಲ್ವಿನ್ ಡೇಸಾ,ಅಡ್ಮಿನ್ ಬ್ಲಾಕಿನ ನಿರ್ದೇಶಕರಾದ ಡಾ.ಡೆನ್ನಿಸ್ ಫೆರ್ನಾಂಡಿಸ್ ಮತ್ತು ಫುಡ್ ಸೈನ್ಸ್ ವಿಭಾಗದ ಶಿಕ್ಷಕ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ದ್ವಿತೀಯ ಎಂ.ಎಸ್ಸಿ.ಯ ಅಪರ್ಣ ಜೋಸ್ ರವರು ಕಾರ್ಯಕ್ರಮ ನಿರೂಪಿಸಿದರು. ಡಾ.ರಿಚರ್ಡ್ ಗೊನ್ಸಾಲ್ವಿಸ್ ಸ್ವಾಗತಿಸಿದರು. ಡಾ.ಎಸ್.ಎನ್. ರಾಘವೇಂದ್ರ ಮತ್ತು ಜೆನಿಸ ಸಿನೊರ ಡಿಸೋಜ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮ ಸಂಯೋಜಕಿ ಶಿಲ್ಪಲೇಖಾ ವಿಶ್ವ ಆಹಾರ ದಿನದ ಬಗ್ಗೆ ತಿಳಿಸಿದರು. ಡಿಡಿಯು ಕೌಶಲ್ ಕೇಂದ್ರದ ಡಾ.ಆದರ್ಶ ಗೌಡ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News