ತೆಂಕನಿಡಿಯೂರು ಕಾಲೇಜಿನಲ್ಲಿ ವಿಶೇಷ ಉಪನ್ಯಾಸ

Update: 2019-10-17 14:23 GMT

ಉಡುಪಿ, ಅ.17: ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ವತಿಯಿಂದ ‘ಇಕಾನಮಿಕ್ ಸ್ಲೋಡೌನ್ ಇಟ್ಸ್ ರಿಪಲ್ಸ್ ಇಪೆಕ್ಟ್ ಇನ್ ಇಂಡಿಯನ್ ಇಕಾನಮಿ’ ಎನ್ನುವ ವಿಷಯ ಕುರಿತು ಉಪನ್ಯಾಸವನ್ನು ಏರ್ಪಡಿಸಲಾಗಿತ್ತು.

ಬಾರಕೂರಿನ ಎಸ್.ಆರ್.ಎಸ್.ಎಂ. ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಪದ್ಮನಾ ಶೆಟ್ಟಿ ಅವರು ಉಪನ್ಯಾಸ ನೀಡಿದರು.

ಇಂದಿನ ಆರ್ಥಿಕ ನಿಧಾನಗತಿಯ ಅಭಿವೃದ್ಧಿಗೆ ಕಾರಣ ಮತ್ತು ನಾವು ತೆಗೆದು ಕೊಳ್ಳಬಹುದಾದ ಕ್ರಮದ ಕುರಿತು ವಿವರಿಸಿದ ಅವರು, ಭಾರತದ ಅರ್ಥ ವ್ಯವಸ್ಥೆಯ ಇತ್ತೀಚಿಗಿನ ಜಿಡಿಪಿ ಬೆಳವಣಿಗೆ ದರ, ನಿರುದ್ಯೋಗದ ದರ ಮುಂತಾದ ಸೂಚ್ಯಂಕಗಳನ್ನು ಗಮನಿಸಿದಾಗ ನಮ್ಮ ಅರ್ಥ ವ್ಯವಸ್ಥೆಯ ಬೆಳವಣಿಗೆ ಜಗತ್ತಿನ ಹಲವಾರು ಅರ್ಥ ವ್ಯವಸ್ಥೆಗಳಲ್ಲಿ ಆದಂತೆ ನಿಧಾನವಾಗಿರುವುದು ಗೋಚರಕ್ಕೆ ಬರುತ್ತದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಎಸ್.ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜಕ ಡಾ.ಸುರೇಶ್ ರೈ ಕೆ., ಅರ್ಥಶಾಸ್ತ್ರ ವಿಬಾಗದ ಮುಖ್ಯಸ್ಥ ಮತ್ತು ಸ್ನಾತಕೋತ್ತರ ವಿಭಾಗದ ಡೀನ್ ಡಾ. ಗೋಪಾಲಕೃಷ್ಣ  ಎಂ. ಗಾಂವ್ಕರ್ ಉಪಸ್ಥಿತರಿದ್ದರು.

ಎಂ.ಎ. ಅರ್ಥಶಾಸ್ತ್ರ ವಿಭಾಗದ ಸುಷ್ಮಾ ಬಿ. ಸ್ವಾಗತಿಸಿದರು. ನಯನ ಕಾರ್ಯಕ್ರಮ ನಿರೂಪಿಸಿ, ಫಕೀರಸ್ವಾಮಿ ಹಿರೇಮಠ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News