ತೊಕ್ಕೊಟ್ಟು: ಹಳಿ ದಾಟುತ್ತಿದ್ದ ಇಬ್ಬರಿಗೆ ರೈಲು ಢಿಕ್ಕಿ; ಓರ್ವ ಸ್ಥಳದಲ್ಲೇ ಮೃತ್ಯು

Update: 2019-10-17 17:21 GMT

ಮಂಗಳೂರು: ರೈಲ್ವೆ ಹಳಿ ದಾಟುತ್ತಿದ್ದ ಇಬ್ಬರಿಗೆ ರೈಲು ಢಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ತೊಕ್ಕೊಟ್ಟುವಿನಲ್ಲಿ ಗುರುವಾರ ನಡೆದಿದೆ.

ಮೃತರನ್ನು ಸುಭಾಷ್ (21) ಎಂದು ಗುರುತಿಸಲಾಗಿದ್ದು, ಮಂಜುನಾಥ್ (25) ಗಂಭೀರವಾಗಿ ಗಾಯಗೊಂಡಿದ್ದಾರೆ.

ವಿಪರೀತ ಮಳೆಯಿಂದ ಗಾಬರಿಗೊಂಡು ರೈಲು ಹಳಿ ದಾಟುವ ವೇಳೆ ಈ ದುರ್ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. 

ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News