ಉಡುಪಿ: ಹುಬ್ಬಳ್ಳಿ ಕಲಾವಿದರ ಚಿತ್ರಕಲಾ ಪ್ರದರ್ಶನ

Update: 2019-10-17 14:46 GMT

ಉಡುಪಿ, ಅ.17: ಹುಬ್ಬಳ್ಳಿಯ ಉದಯೋನ್ಮುಖ ವರ್ಣಚಿತ್ರ ಕಲಾವಿದ ಕೆ.ವಿ.ಶಂಕರ್ ಅವರ ಚಿತ್ರಕಲಾ ಪ್ರದರ್ಶನ, ಉಡುಪಿಯ ಆರ್ಟಿಸ್ಟ್ ಫೋರಂನ ಆಶ್ರಯದಲ್ಲಿ ಅ.19ರಿಂದ 21ರವರೆಗೆ ಉಡುಪಿಯ ಗ್ಯಾಲರಿ ದೃಷ್ಟಿಯಲ್ಲಿ ನಡೆಯಲಿದೆ ಎಂದು ಆರ್ಟಿಸ್ಟ್ ಫೋರಂನ ಕಾರ್ಯದರ್ಶಿ ಸಕು ಪಾಂಗಾಳ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ವಿ.ಶಂಕರ್ ಅವರು ಜಲವರ್ಣ, ಎಕ್ರಲಿಕ್ ಮಾಧ್ಯಮಗಳಲ್ಲಿ ರೇಖಾಚಿತ್ರಗಳ ಮೂಲಕ ರಚಿಸಿದ ಸುಮಾರು 30 ಕಲಾಕೃತಿಗಳು ಮೂರು ದಿನಗಳ ಕಾಲ ಪ್ರದರ್ಶನಗೊಳ್ಳಲಿದೆ ಎಂದರು.

ಅ.20ರ ಅಪರಾಹ್ನ 2 ಗಂಟೆಗೆ ಶಂಕರ್ ಅವರಿಂದ ಚಿತ್ರಕಲಾ ಪ್ರಾತ್ಯಕ್ಷಿಕೆಯು ಗ್ಯಾಲರಿ ದೃಷ್ಟಿಯಲ್ಲಿ ನಡೆಯಲಿದೆ ಎಂದೂ ಸಕು ಪಾಂಗಾಳ ತಿಳಿಸಿದರು. ಶಂಕರ್ ಅವರು ಇಂದು ಅಪರೂಪ ಎನ್ನಬಹುದಾದ ಜಾನಪದ ಸಂಗೀತವಾದ್ಯಗಳನ್ನು ನುಡಿಸುವವರ, ಧಾರ್ಮಿಕ ಆಚರಣೆಗಳ ಸನ್ನಿವೇಶಗಳ ಕಲಾಕೃತಿಗಳ ಮೂಲಕ ತನ್ನ ಭಾವನೆಗಳನ್ನು ಅಭಿವ್ಯಕ್ತಗೊಳಿಸಿದ್ದಾರೆ ಎಂದರು.

ಚಿತ್ರಕಲಾ ಪ್ರದರ್ಶನವನ್ನು ಅ.19ರ ಶನಿವಾರ ಸಂಜೆ 4:30ಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಅವರು ಉದ್ಘಾಟಿಸ ಲಿದ್ದಾರೆ. ದಂತ ವೈದ್ಯ ಡಾ.ವಿಜಯೇಂದ್ರ ವಸಂತ್ ಹಾಗೂ ಬ್ರಹ್ಮಾವರದ ಪ್ರಕಾಶ್ಚಂದ್ರ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದು, ಆರ್ಟಿಸ್ಟ್ ಫೋರಂನ ಅಧ್ಯಕ್ಷ, ಕಲಾವಿದ ರಮೆೀಶ್ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ.

ಚಿತ್ರಕಲಾ ಪ್ರದರ್ಶನವನ್ನು ಅ.19ರ ಶನಿವಾರ ಸಂಜೆ 4:30ಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಅವರು ಉದ್ಘಾಟಿಸಲಿದ್ದಾರೆ. ದಂತ ವೈದ್ಯ ಡಾ.ವಿಜಯೇಂದ್ರ ವಸಂತ್ ಹಾಗೂ ಬ್ರಹ್ಮಾವರದ ಪ್ರಕಾಶ್ಚಂದ್ರ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದು, ಆರ್ಟಿಸ್ಟ್ ಫೋರಂನ ಅ್ಯಕ್ಷ,ಕಲಾವಿದರಮೇಶ್‌ರಾವ್‌ಅ್ಯಕ್ಷತೆ ವಹಿಸಲಿದ್ದಾರೆ. ಚಿತ್ರಕಲಾ ಪ್ರದರ್ಶನ ಅ.19ರಿಂದ 21ರವರೆಗೆ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ. ಸುದ್ದಿಗೋಷ್ಠಿಯಲ್ಲಿ ಆರ್ಟಿಸ್ಟ್ ಫೋರಂನ ಪ್ರಸಾದ್ ರಾವ್ ಹಾಗೂ ಸಿಂಧು ಕಾಮತ್ ಉಪಸ್ಥಿತ ರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News