ಈಜು ಸ್ಪರ್ಧೆ: ಮುಹಮ್ಮದ್ ಅಶ್ಫಾಖ್ ಯುನಿವರ್ಸಿಟಿ ಬ್ಲೂ ಆಗಿ ನೇಮಕ

Update: 2019-10-17 16:03 GMT

ಭಟ್ಕಳ: ಇಲ್ಲಿನ ಪ್ರತಿಷ್ಠಿತ ಅಂಜುಮನ್ ಹಾಮಿಯೇ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಪದವಿ ಮಹಾವಿದ್ಯಾಲಯ ವಾಣಿಜ್ಯ ವಿಭಾಗದ  ವಿದ್ಯಾರ್ಥಿ ಮುಹಮ್ಮದ್ ಅಶ್ಫಾಖ್ ಬಿನ್ ಮುಹಮ್ಮದ್ ಅಸ್ಲಮ್ ಈಜು ಸ್ಪರ್ಧೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಬ್ಲೂ ಆಗಿ ನೇಮಕ ಗೊಂಡಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.

ಕ.ವಿ.ಧಾರವಾಡವು ಸೆ.23 ರಿಂದ 25 ವರೆಗೆ ಹುಬ್ಬಳ್ಳಿಯ ಫ್ಲಾಶ್ ಸ್ವಿಮ್ಮಿಂಗ ಪೂಲ್ ನಲ್ಲಿ ಆಯೋಜಿಸಿದ್ದ ಈಜು ಸ್ಪರ್ಧೆಯಲ್ಲಿ ಅಂಜುಮನ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದ್ದು ಅದರಲ್ಲಿ ಉತ್ತಮ ಸಾಧನೆಗೈದ ಮುಹಮ್ಮದ್ ಅಶ್ಫಾಖ್ ವಿಶ್ವವಿದ್ಯಾಲಯ ಬ್ಲೂ ಆಗಿ ನೇಮಕಗೊಳ್ಳುವುದರ ಮೂಲಕ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸುವ ಆರ್ಹತೆಯನ್ನು ಪಡೆದುಕೊಂಡಿದ್ದಾರೆ.

ಪಂಜಾಬ್ ರಾಜ್ಯದ ಲವ್ಲಿ ಪ್ರೋಫೆಶನಲ್ ಯುನಿವರ್ಸಿಟಿ ಪಾಗ್ವಾರಾ(ಕಪುರ್ಥಾಲಾ ಜಿಲ್ಲೆ)ದಲ್ಲಿ ನವೆಂಬರ್ 1ರಿಂದ 4ರ ವರೆಗೆ ಜರಗುವ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಲಿದ್ದಾನೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದ್ದು ವಿದ್ಯಾರ್ಥಿಯ ಸಾಧನೆಗೆ ಆಡಳಿತ ಮಂಡಳಿ, ಪಾಂಶುಪಾಲರು ಹಾಗೂ ಸಿಬಂಧಿ ವರ್ಗ ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News