ಮಂಗಳೂರು: ಗಾಂಜಾ ಮಾರಾಟ ಆರೋಪಿ ಸೆರೆ

Update: 2019-10-17 16:59 GMT

ಮಂಗಳೂರು, ಅ.17: ನಗರದ ರಾವ್ ಆ್ಯಂಡ್ ರಾವ್ ವೃತ್ತ ಸಮೀಪದ ಪೆಟ್ರೋಲ್ ಪಂಪ್ ಎದುರು ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದ ಆರೋಪಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಗುರುಪುರ ಕೈಕಂಬ ನಿವಾಸಿ ಮುಹಮ್ಮದ್ ಪೈರೋಝ್ (23) ಬಂಧಿತ ಆರೋಪಿ.

ಆರೋಪಿಯಿಂದ ಸುಮಾರು 127 ಗ್ರಾಂ ತೂಕದ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಮೊಬೈಲ್ ಪೋನ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಕನಾಮಿಕ್ ಆ್ಯಂಡ್ ನಾರ್ಕೋಟಿಕ್ಸ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News