ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್‍ನ ಮಾಜಿ ಟ್ರಸ್ಟಿ ವಿ.ಎಸ್.ಜೋಸೆಫ್ ನಿಧನ

Update: 2019-10-17 17:17 GMT

ಉಪ್ಪಿನಂಗಡಿ: ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್‍ನ ಮಾಜಿ ಟ್ರಸ್ಟಿ, ನೆಲ್ಯಾಡಿ ಗ್ರಾಮದ ಪಡ್ಡಡ್ಕ ವಜಕ್ಕಾಲ ನಿವಾಸಿ ವಿ.ಎಸ್. ಜೋಸೆಫ್(74) ಅನಾರೋಗ್ಯದಿಂದ ಅ.16ರಂದು ರಾತ್ರಿ ನಿಧನರಾದರು.

ಮೂಲತಃ ಕೇರಳದ ಕೊಟ್ಟಾಯಂ ನಿವಾಸಿಯಾಗಿದ್ದ ಜೋಸೆಫ್‍ರವರು 50 ವರ್ಷಗಳ ಹಿಂದೆ ನೆಲ್ಯಾಡಿಗೆ ಆಗಮಿಸಿ ಕೃಷಿ, ಉದ್ಯಮ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರು.

ಅ.15ರಂದು ದಿಢೀರ್ ಅನಾರೋಗ್ಯಕ್ಕೆ ಒಳಗಾಗಿದ್ದ ಜೋಸೆಫ್‍ರವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅ.16ರಂದು ರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ. ಮೂರು ದಿನದ ಹಿಂದೆ (ಅ.14) ನೆಲ್ಯಾಡಿಯಲ್ಲಿ ತನ್ನ ಪುತ್ರ ಟೋಮಿ ವಿ.ಜೆ. ರವರು ನಿರ್ಮಿಸಿದ್ದ ಸೈಂಟ್ ಮೇರಿ ಕಾಂಪ್ಲೆಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಲವಲವಿಕೆಯಿಂದ ಪಾಲ್ಗೊಂಡಿದ್ದ ಜೋಸೆಫ್‍ರವರು ಕಾಂಪ್ಲೆಕ್ಸ್‍ನ ಉದ್ಘಾಟನೆಯನ್ನು ನೆರವೇರಿಸಿದ್ದರು. ಅದರ ಮರುದಿನ (ಅ.16)ವೇ ಅವರು ಅನಾರೋಗ್ಯಕ್ಕೆ ಒಳಗಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೋಸೆಫ್‍ರವರು ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್‍ನ ಆಶ್ರಯದಲ್ಲಿರುವ ವಿನ್ಸೆಂಟ್ ಡಿ.ಪೌಲ್ ಎಂಬ ಸೊಸೈಟಿಯ ಸಕ್ರೀಯ ಕಾರ್ಯಕರ್ತರೂ ಆಗಿದ್ದರು.

ಮೃತರು ಪತ್ನಿ ಹಾಗೂ ನಾಲ್ವರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News