ಕಾಂತಾವರ ಕನ್ನಡ ಸಂಘದ ಐದು ದತ್ತಿನಿಧಿ ಪ್ರಶಸ್ತಿಗಳ ಘೋಷಣೆ

Update: 2019-10-17 17:19 GMT

ಮೂಡುಬಿದಿರೆ: ಕಾಂತಾವರ ಕನ್ನಡ ಸಂಘವು ಪ್ರತಿ ವರ್ಷ ನ. 1 ಮತ್ತು 2ರಂದು ಆಚರಿಸುತ್ತಾ ಬಂದಿರುವ ‘ಕಾಂತಾವರ ಉತ್ಸವ’ದಲ್ಲಿ ನೀಡುವ ಐದು ದತ್ತಿನಿಧಿ ಪ್ರಶಸ್ತಿಗಳು ಸಂಘದ ಕಾರ್ಯಾಧ್ಯಕ್ಷರಾದ ಶ್ರೀ ನಿರಂಜನ ಮೊಗಸಾಲೆ ಅವರ ಅಧ್ಯಕ್ಷತೆಯಲ್ಲಿ ನಿಷ್ಕರ್ಷಿಸಲ್ಪಟ್ಟಿದ್ದು ಈ ಕೆಳಗಿನ ಸಾಧಕರು ಪ್ರಶಸ್ತಿಗಳಿಗೆ  ಭಾಜನರಾಗಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಅವರು ತಿಳಿಸಿದ್ದಾರೆ.

ಕೆ.ಬಿ.ಜಿನರಾಜ ಹೆಗ್ಡೆ ಸ್ಮಾರಕ ದತ್ತಿನಿಧಿಯ ಕರ್ನಾಟಕ ಏಕೀಕರಣ ಸಾಂಸ್ಕøತಿಕ ಪ್ರಶಸ್ತಿಯು ಮನೋಹರ ಗ್ರಂಥಮಾಲೆಯ ರಮಾಕಾಂತ ಜೋಶಿ ಅವರಿಗೆ, ಪಂಡಿತ ಯಜ್ಞನಾರಾಯಣ ಉಡುಪ ದತ್ತಿನಿಧಿಯ ವಿದ್ವತ್‍ಪರಂಪರಾ ಪ್ರಶಸ್ತಿಯು ಡಾ.ಎಸ್.ಆರ್.ವಿಘ್ನರಾಜ ಅವರಿಗೆ, ಡಾ.ಯು.ಪಿ.ಉಪಾಧ್ಯಾಯ ದತ್ತಿನಿಧಿಯ ಸಂಶೋಧನಾ ಪ್ರಶಸ್ತಿಯು ಪುಟ್ಟು ಕುಲಕರ್ಣಿ ಅವರಿಗೆ, ಮೊಗಸಾಲೆ ಪ್ರತಿಷ್ಠಾನದ ಕಾಂತಾವರ ಲಲಿತಕಲಾ ಪ್ರಶಸ್ತಿಯು ಪಿ.ಎಸ್.ಪುಂಚಿತ್ತಾಯ ಅವರಿಗೆ, ಸರೋಜಿನಿ ನಾಗಪ್ಪಯ್ಯ ದತ್ತಿನಿಧಿಯ ಕಾಂತಾವರ ಸಾಹಿತ್ಯ ಪುರಸ್ಕಾರವು ಶಾರದಾ ಭಟ್ ಅವರಿಗೆ ಲಭ್ಯವಾಗಿದೆ.

ಪ್ರತಿ ಪ್ರಶಸ್ತಿಗಳು ತಲಾ 12 ಸಾವಿರ ರೂ. ನಗದು, ತಾಮ್ರ ಪತ್ರ, ಮತ್ತು ಸನ್ಮಾನವನ್ನು ಒಳಗೊಂಡಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವು ನ. 1ರಂದು ಸಂಜೆ 3ಗಂಟೆಗೆ ಕಾಂತಾವರ ಕನ್ನಡ ಭವನದಲ್ಲಿ ನಡೆಯಲಿದ್ದು, ಹರಿಕೃಷ್ಣ ಪುನರೂರು ಪ್ರಶಸ್ತಿ ಪ್ರದಾನ ಮಾಡಲಿರುವರು ಎಂದು ಸಂಘದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News