​ದೇಶದ ಪ್ರಗತಿಯಲ್ಲಿ ನ್ಯಾನೊ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಲಿದೆ : ಡಾ. ಕೆ.ಭೈರಪ್ಪ

Update: 2019-10-18 08:39 GMT

ಮಂಗಳೂರು, ಅ.18: ಆಧುನಿಕ ತಂತ್ರಜ್ಞಾನ ಯುಗದಲ್ಲಿ ದೇಶದ ಪ್ರಗತಿಯಲ್ಲಿ ನ್ಯಾನೋ ತಂತ್ರಜ್ಞಾನ ಪ್ರಮುಖ ಪಾತ್ರವಹಿಸಲಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಕೆ. ಭೈರಪ್ಪ ತಿಳಿಸಿದ್ದಾರೆ.

ನಗರದ ಶ್ರೀ ನಿವಾಸ ಕಾಲೇಜಿನ ಸಭಾಂಗಣದಲ್ಲಿಂದು ಹಮ್ಮಿಕೊಂಡ ಎರಡು ದಿನಗಳ ಅಂತಾರಾಷ್ಟ್ರೀಯ ಮಟ್ಟದ ನ್ಯಾನೋ ತಂತ್ರಜ್ಞಾನದ ಸಮ್ಮೇಳನವನ್ನು  ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಮತ್ತು ಆದಿ ಚುಂಚನಗಿರಿ ವಿಶ್ವ ವಿದ್ಯಾನಿಲಯದ ಸಹ ಕುಲಾಧಿಪತಿ ಡಾ. ಭೈರಪ್ಪ ಉದ್ಘಾಟಿಸಿ ಮಾತನಾಡುತ್ತಿದ್ದರು.

ಭಾರತಕ್ಕೆ ನ್ಯಾನೋ ತಂತ್ರಜ್ಞಾನ ಹೊಸ ವಿಷಯವಲ್ಲ ಸಾವಿರಾರು ವರ್ಷ ಗಳ ಹಿಂದೆ ದೇಶದಲ್ಲಿ ಈ ತಂತ್ರಜ್ಞಾನಕ್ಕೆ ಹತ್ತಿರವಾದ ಜ್ಞಾನ ಇತ್ತು.ಪ್ರಾಚೀನ ಲೋಹವಿಧ್ಯೆ, ಆರ್ಯವೇದದಲ್ಲಿ ನ್ಯಾನೋ ತಂತ್ರಜ್ಞಾನ ದ ಬಳಕೆ ನಡೆದಿದೆ.21ನೆ ಶತಮಾನ ದಲ್ಲಿ ನ್ಯಾನೋ ಮೆಡಿಸಿನ್, ತಾಂತ್ರಿ ಕ ತೆಯಲ್ಲಿ ನ್ಯಾನೋ ಜ್ಞಾನ ಬಳಕೆಯಾ ಗುತ್ತಿದೆ ಎಂದು ಭೈರಪ್ಪ ತಿಳಿಸಿದ್ದಾರೆ.

ಸಮಾರಂಭದಲ್ಲಿ ಮುಖ್ಯ ಅತಿಥಿ ಗಳಾಗಿ ಕೊಚ್ಚಿನ್ ವಿಶ್ವವಿದ್ಯಾಲಯ ದ ಪ್ರೊ.ಡಾ. ವಿ.ಪಿ.ಎನ್. ನಾಂಪುರಿ,ಡಾ.ಕಲ್ಲಪ್ಪ ಪ್ರಶಾಂತ ಕೆ.ಫ್ರಾನ್ಸ್, ಚೆನ್ನೈ ಯ ಪೇಟೆಂಟ್ ಆಫೀಸರ್ ಪ್ರಸಾದ್ ರಾವ್, ನ್ಯಾನೊ ತಂತ್ರಜ್ಞಾನದಲ್ಲಿ ತೊಡಗಿರುವ ಡಾ.ಕಿರಣ್ ಮಂಜಪ್ಪ ತೈವಾನ್ , ಡಾ.ಮನೋಜ್ ಕೃಷ್ಣ ಬಿಎಎಸ್ ಎಫ್ ,ಶ್ರೀನಿವಾಸ ವಿಶ್ವ ವಿದ್ಯಾನಿಲಯದ ಕುಲಾಧಿಪತಿ ಸಿ.ಎ. ರಾಘವೇಂದ್ರ ರಾವ್, ಸಹ ಕುಲಾಧಿಪತಿ ಡಾ.ಎ. ಶ್ರೀನಿವಾಸರಾವ್, ಡಾ ಪ್ರಭಾವತಿ ರಾವ್ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ತಂತ್ರಜ್ಞಾನ ಮಂಡಳಿಯ ವಿವೇಕ್ ಆನಂದ್  ಶ್ರೀನಿವಾಸ ಕಾಲೇಜಿನ ಕುಲಪತಿ ಡಾ.ಪಿ.ಎಸ್.ಐತಾಳ್ ಸ್ವಾಗತಿಸಿದರು.

ಸಮ್ಮೇಳನದ ಸಂಚಾಲಕ ಡಾ.ಪ್ರವೀಣ್, ಶ್ರೀನಿವಾಸ ತಂತ್ರಜ್ಞಾನ ಕಾಲೇಜಿನ ಡೀನ್  ಡಾ.ಥಾಮಸ್ ಪಿಂಟೋ, ಕುಲಸಚಿವ ಡಾ.ಅನಿಲ್ ಕುಮಾರ್, ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News