ಇರಾ: ಮನೆಯಿಂದ ನಗ-ನಗದು ಕಳವು

Update: 2019-10-19 07:12 GMT

ಬಂಟ್ವಾಳ, ಅ. 19: ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ಕಳವುಗೈದ ಘಟನೆ ತಾಲೂಕಿನ ಮಂಚಿ ಸಮೀಪದ  ಇರಾ ಎಂಬಲ್ಲಿ ನಡೆದಿದೆ.

ಇರಾ ಗ್ರಾಮದ ಪಂಜಿಕಲ್ಲು ಸೂತ್ರಬೈಲು ನಿವಾಸಿ ಇಬ್ರಾಹೀಂ ರಿಯಾಝ್ ಎಂಬವರ ಮನೆಗೆ ನುಗ್ಗಿದ ಕಳ್ಳರು, ಸುಮಾರು 50 ಸಾವಿರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಇಬ್ರಾಹೀಂ ಅವರ ಮನೆಯ ಕಿಟಕಿಯ ಮೂಲಕ ಹಿಂಬದಿಯ ಬಾಗಿಲು ಚಿಲಕ ತೆಗೆದು ಮನೆಯ ಒಳಗೆ ಪ್ರವೇಶಿಸಿದ ಕಳ್ಳರು, ಕೋಣೆಯ ಕಪಾಟಿನಲ್ಲಿಟ್ಟಿದ್ದ 12 ಗ್ರಾಂ ಚಿನ್ನದ ಸರ, 4 ಗ್ರಾಂನ ಬ್ರಾಸ್ ಲೈಟ್ ಹಾಗೂ 200 ರೂ. ನಗದು ಕಳವು ಮಾಡಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ‌.

ಅದಲ್ಲದೆ, ರಿಯಾಝ್ ಅವರ ಮನೆಯ ಸಮೀಪದ ಇಸ್ಮಾಯೀಲ್ ಎಂಬವರ ಮನೆಗೆ ನುಗ್ಗಲು ಕಳ್ಳರು ವಿಫಲ ಪ್ರಯತ್ನ ನಡೆಸಿದ್ದಾಗಿ ತಿಳಿದುಬಂದಿದೆ.

ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿದೆ.

ಬಂಟ್ವಾಳ ಗ್ರಾಮಾಂತರ ಎಸ್ಸೈ ಪ್ರಸನ್ನ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಇಬ್ರಾಹೀಂ ರಿಯಾಝ್ ನೀಡಿರುವ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News