ಜಂಇಯ್ಯತುಲ್ ಉಲಮಾ ಝೋನಲ್ ಮುಲಾಖಾತ್ ಗೆ ಚಾಲನೆ

Update: 2019-10-19 08:39 GMT

ಬಂಟ್ವಾಳ, ಅ.19: ಕರ್ನಾಟಕ ರಾಜ್ಯ ಸುನ್ನೀ ಜಂಇಯ್ಯತುಲ್ ಉಲಮಾ ಇದರ ಅಧೀನದ ಜಂಇಯ್ಯತುಲ್ ಉಲಮಾ ಝೋನಲ್ ಮುಲಾಖಾತ್ ನವೆಂಬರ್ ಒಂದರಿಂದ ಡಿಸೆಂಬರ್ ಮೂವತ್ತರ ತನಕ ಎರಡು ತಿಂಗಳುಗಳ ಕಾಲ ನಡೆಯಲಿದೆ. ಇದರ ಚಾಲನಾ ಸಮಾವೇಶವು ಬಿ.ಸಿ.ರೋಡಿನಲ್ಲಿರುವ ದ.ಕ. ಜಿಲ್ಲಾ ಎಸ್ಸೆಸ್ಸೆಫ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಸುನ್ನೀ ಕೋ ಆರ್ಡಿನೇಶನ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ನ ಮುಲಾಖಾತ್ ಅನ್ನು ಉದ್ಘಾಟಿಸಿದರು.

ಜಂಇಯ್ಯತುಲ್ ಉಲಮಾ ರಾಜ್ಯ ಕಾರ್ಯದರ್ಶಿ ಎಸ್.ಪಿ.ಹಂಝ ಸಖಾಫಿ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು.

ಎಸ್.ವೈ.ಎಸ್. ರಾಜ್ಯಾಧ್ಯಕ್ಷ ಜಿ.ಎಂ.ಮುಹಮ್ಮದ್ ಕಾಮಿಲ್ ಸಖಾಫಿ, ಮುಶಾವರ ಸದಸ್ಯರಾದ ಉಮರ್ ಸಖಾಫಿ ಕಂಬಳಬೆಟ್ಟು, ಎಸ್.ಇ.ಡಿ.ಸಿ. ನಾಯಕ ಖಲೀಲ್ ಸಖಾಫಿ ಜಾಲ್ಸೂರು, ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರು, ಅಬ್ದುಲ್ ಮಜೀದ್ ಸಅದಿ ಮುಡಿಪು,  ಹಾಫಿಳ್ ಯಾಕೂಬ್ ಸಅದಿ ನಾವೂರು, ಬದ್ರುದ್ದೀನ್ ಅಝ್ಹರಿ ಕೈಕಂಬ, ತ್ವಾಹ ಸಅದಿ ಪಾಣೆಮಂಗಳೂರು, ಅಬ್ದುಲ್ ಖಾದರ್ ಫೈಝಿ ಕೊಡುಂಗಾಯಿ, ಇಬ್ರಾಹೀಂ ಮದನಿ ಕಂಬಳಬೆಟ್ಟು, ಫಾರೂಕ್ ಸಖಾಫಿ ಕಾಟಿಪಳ್ಳ, ಅಶ್ರಫ್ ಸಖಾಫಿ ಸವಣೂರು, ಎಂ.ಬಿ.ಅಬೂಬಕರ್ ಸಖಾಫಿ ಬಾಳೆಪುಣಿ, ಶಿಹಾಬುದ್ದೀನ್ ಸಖಾಫಿ ಉಳ್ಳಾಲ, ಹಾಫಿಳ್ ಅಹ್ಮದ್ ಮಳಲಿ, ರಫೀಕ್ ಸಅದಿ ಮಿತ್ತೂರು ಹಾಗೂ ತಾಲೂಕು ಮತ್ತು ಝೋನಲ್ ಪದಾಧಿಕಾರಿಗಳು  ಭಾಗವಹಿಸಿದ್ದರು.

ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ತೋಕೆ ಮುಹಿಯುದ್ದೀನ್ ಸಖಾಫಿ ಸ್ವಾಗತಿಸಿದರು.

ಖಲೀಲ್ ಸಖಾಫಿ ಜಾಲ್ಸೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News