ಅ.22: ಶ್ರೀನಿವಾಸ ವಿವಿಯಲ್ಲಿ ‘ಮ್ಯಾಗ್ಮಾ’ ಅಂತರ್ ಕಾಲೇಜು ಸ್ಪರ್ಧೋತ್ಸವ

Update: 2019-10-19 14:07 GMT

ಮಂಗಳೂರು, ಅ.19: ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾನಿಲಯದ ಸಂಕೀರ್ಣದಲ್ಲಿ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಗಾಗಿ ಅ. 22ರಂದು ರಾಷ್ಟ್ರೀಯ ಮಟ್ಟದ ಅಂತರ್ ಕಾಲೇಜು ಸ್ಪರ್ಧೋತ್ಸವ ‘ಮ್ಯಾಗ್ಮಾ-2019’ ಆಯೋಜಿಸಲಾಗಿದೆ ಎಂದು ಸಂಸ್ಥೆ ಮ್ಯಾನೇಜ್‌ಮೆಂಟ್ ಮತ್ತು ಕಾಮರ್ಸ್ ವಿಭಾಗದ ಡೀನ್ ಡಾ. ಶೈಲಶ್ರೀ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿವಿಯ ಎಂಬಿಎ ವಿಭಾಗದ ವತಿಯಿಂದ ಆಯೋಜಿಸಲಾದ ಸ್ಪರ್ಧೋತ್ಸವಕ್ಕೆ ಅಂದು ಬೆಳಗ್ಗೆ 10:30ಕ್ಕೆ ಕೊಲ್ಕತ್ತಾದ ಕ್ಯಾಟಲಿಸ್ಟ್ ಪೋರ್ಟ್‌ಪೋಲಿಯೊ ಮ್ಯಾನೇಜ್‌ಮೆಂಟ್ ಸರ್ವಿಸಸ್‌ನ ಮುಖ್ಯಸ್ಥ ಸಂತೋಷ್ ಗಿರಿ ಚಾಲನೆ ನೀಡಲಿದ್ದಾರೆ. ದೇಶದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು.

ಮ್ಯಾಗ್ಮಾಷಿಯನ್-ಮ್ಯಾನೇಜ್‌ಮೆಂಟ್ ವಿದ್ ಮ್ಯೂಸಿಕಲ್ ಮೈಂಡ್ಸ್ ಶೀರ್ಷಿಕೆಯಡಿ ನಡೆಯುವ ಸ್ಪರ್ಧೋತ್ಸವದಲ್ಲಿ 25 ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಎ. ಶಾಮರಾವ್ ಪ್ರತಿಷ್ಠಾನದ ಅಧ್ಯಕ್ಷ ಎ.ರಾಘವೇಂದ್ರ ರಾವ್ ಅಧ್ಯಕ್ಷತೆ ವಹಿಸುವರು ಎಂದು ಡಾ.ಶೈಲಶ್ರೀ ನುಡಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಸಹ ಸಂಯೋಜಕ ಪ್ರೊ.ಅನುಮೇಶ್ ಕಾರಿಯಪ್ಪ, ಪ್ರೊ.ಸಾಗರ್ ಶ್ರೀನಿವಾಸ್, ವಿದ್ಯಾರ್ಥಿ ಸಂಚಾಲಕ ಕಾರ್ತಿಕ್ ನಾಯಕ್, ವಿದ್ಯಾರ್ಥಿ ನಾಯಕ ನಬೀಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News