ಉಡುಪಿ: ಹೊಲಿಗೆ ಯಂತ್ರ ಖರೀದಿಗೆ ಸಹಾಯ ಧನ

Update: 2019-10-19 14:47 GMT

ಉಡುಪಿ, ಅ.19: ಕೈಮಗ್ಗ ಮತ್ತು ಜವಳಿ ಇಲಾಖೆಯ ನೂತನ ಜವಳಿ ನೀತಿ ಯೋಜನೆಯಡಿ ಇಂಡಸ್ಟ್ರಿಯಲ್ ಸೀವಿಂಗ್ ಮೆಷಿನ್ ಅಪರೇಟರ್ ತರಬೇತಿ ಪಡೆದ ಸಾಮಾನ್ಯ /ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮಹಿಳಾ ಫಲಾನುವಿಗಳಿಗೆ ಸ್ವಯಂಉದ್ಯೋಗಕ್ಕಾಗಿ ಇಂಡಸ್ಟ್ರಿಯಲ್ ಸೀವಿಂಗ್ ಮೆಷಿನ್ (ಹೊಲಿಗೆ ಯಂತ್ರ) ಖರೀದಿಸಲು ಶೇ.50ರಷ್ಟು ಸಹಾಯಧನ ದೊಂದಿಗೆ 2019-20ನೇ ಸಾಲಿನ ಆಯವ್ಯಯದಲ್ಲಿ ನಿಧಿ ಯೋಜನೆ ಜಾರಿ ಗೊಳಿಸಲಾಗಿದೆ.

ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಕೆಲಸ ಮಾಡಲಾಗದ ಗ್ರಾಮೀಣ ಮಹಿಳೆ ಯರಿಗೆ ಸ್ವಯಂ ಉದ್ಯೋಗ ಕಲ್ಪಿಸಲು 30,000 ರೂ. ಘಟಕ ವೆಚ್ಚದಲ್ಲಿ ಒಂದು ಇಂಡಸ್ಟ್ರಿಯಲ್ ಹೊಲಿಗೆ ಯಂತ್ರ ಖರೀದಿಸಲು ಶೇ.50ರಷ್ಟು ಸಹಾಯಧನ ಒದಗಿಸಲಾಗುವುದು.

ಫಲಾನುಭವಿ ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು, ಸ್ವಂತ/ ಲೀಸ್/ ಬಾಡಿಗೆ ಮನೆ ಹೊಂದಿರಬೇಕು. ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ನೂತನ ಜವಳಿ ನೀತಿಯಡಿ ಸೀವಿಂಗ್ ಮೆಷಿನ್ ಅಪರೇಟರ್ ತರಬೇತಿ ಪಡೆದ ಮಹಿಳೆಯಾಗಿರಬೇಕು. ಮನೆಯಲ್ಲಿ ಇಂಡಸ್ಟ್ರಿಯಲ್ ಹೊಲಿಗೆ ಯಂತ್ರ ಅಳವಡಿಸಲು ಅವಶ್ಯವಿರುವ ವಿದ್ಯುತ್ ಸಂಪರ್ಕ ಹೊಂದಿರಬೇಕು.

ಘಟಕ ಸ್ಥಾಪಿಸಲು ಬ್ಯಾಂಕಿನಿಂದ ಸಾಲ ಪಡೆದು ಅಥವಾ ಸ್ವಂತ ಬಂಡವಾಳ ದೊಂದಿಗೆ ಘಟಕ ಸ್ಥಾಪಿಸಿದ ನಂತರ ಅಗತ್ಯ ದಾಖಲಾತಿ ಗಳೊಂದಿಗೆ ಸರಕಾರದ ಸಹಾಯಧನಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಛೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ರಜತಾದ್ರಿ, ಉಡುಪಿ ಮಣಿಪಾಲ (ಮೊಬೈಲ್:9481628584) ಇವರನ್ನು ಸಂಪರ್ಕಿುವಂತೆ ಇಲಾಖೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News