ಪ್ರೊ ಕಬಡ್ಡಿ ಲೀಗ್: ಬಂಗಾಳ ವಾರಿಯರ್ಸ್ ಚಾಂಪಿಯನ್

Update: 2019-10-19 15:41 GMT

ಅಹ್ಮದಾಬಾದ್,ಅ.19: ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಬಂಗಾಳ ವಾರಿಯರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.

ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ವಾರಿಯರ್ಸ್ ತಂಡ ದಿಲ್ಲಿ ದಬಾಂಗ್ ತಂಡವನ್ನು 39-34 ಅಂಕಗಳ ಅಂತರದಿಂದ ಮಣಿಸಿತು. ಈ ಮೂಲಕ ಮೊದಲ ಬಾರಿ ಪ್ರೊ ಕಬಡ್ಡಿ ಲೀಗ್ ಪ್ರಶಸ್ತಿ ಬಾಚಿಕೊಂಡಿತು.

 ಉಭಯ ತಂಡಗಳು ಮೊದಲ ಬಾರಿ ಪ್ರಶಸ್ತಿ ಸುತ್ತಿಗೆ ತೇರ್ಗಡೆಯಾಗಿದ್ದವು. ಪ್ರಶಸ್ತಿ ವಿಜೇತ ಬಂಗಾಳದ ಪರ ಇಸ್ಮಾಯೀಲ್ ನಬೀಬಕ್ಷ್ 10 ಅಂಕ ಗಳಿಸಿದರೆ,ಕನ್ನಡಿಗ ಸುಕೇಶ್ ಹೆಗ್ಡೆ 8 ಹಾಗೂ ರವೀಂದ್ರ 6 ಅಂಕಗಳಿಸಿ ಮಿಂಚಿದರು.

ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಫೇವರಿಟ್ ಆಗಿದ್ದ ದಿಲ್ಲಿ ತಂಡ ರನ್ನರ್ಸ್ -ಅಪ್‌ಗೆ ತೃಪ್ತಿಪಟ್ಟುಕೊಂಡಿತು. ಎಂದಿನಂತೆ ನವೀನ್ ಕುಮಾರ್(18 ಅಂಕ)ಏಕಾಂಗಿ ಹೋರಾಟ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News