ಅಭಿನವ್ ಬಿಂದ್ರಾ ಬಾಕ್ಸಿಂಗ್ ನಲ್ಲಿ ಹಸ್ತಕ್ಷೇಪ ಮಾಡಕೂಡದು: ಮೇರಿ ಕೋಮ್

Update: 2019-10-19 18:17 GMT

ಹೊಸದಿಲ್ಲಿ,ಅ.19: ತನಗೂ ನ್ಯಾಯಬದ್ಧ ಅವಕಾಶ ದೊರೆಯಬೇಕು ಎಂಬ ಬಾಕ್ಸರ್ ನಿಕತ್ ಝರೀನ್ ಅವರ ಬೇಡಿಕೆಗೆ ಬೆಂಬಲ ಸೂಚಿಸಿರುವ ಶೂಟರ್ ಅಭಿನವ್ ಬಿಂದ್ರಾರನ್ನು ತರಾಟೆಗೆ ತೆಗೆದುಕೊಂಡಿರುವ ಮೇರಿ ಕೋಮ್, ಬಾಕ್ಸಿಂಗ್ ಅಭಿನವ್ ಬಿಂದ್ರಾರ ಕ್ರೀಡೆಯಲ್ಲ, ಹಾಗಾಗಿ ಅವರು ಇದರಲ್ಲಿ ಹಸ್ತಕ್ಷೇಪ ಮಾಡಕೂಡದು ಎಂದು ತಿಳಿಸಿದ್ದಾರೆ.

 ಟೋಕಿಯೊ ಒಲಿಂಪಿಕ್ಸ್‌ಗೆ ಪ್ರವೇಶ ಪಡೆಯಲು ಚೀನಾದ ವುಹಾನ್‌ನಲ್ಲಿ ನಡೆಯಲಿರುವ ಅರ್ಹತಾ ಪಂದ್ಯಕ್ಕೆ ತೆರಳಲು ತನಗೂ ಸಮಾನ ಅವಕಾಶ ದೊರೆಯಬೇಕು ಎಂಬ ನಿಖತ್ ಬೇಡಿಕೆಯನ್ನು ಬಿಂದ್ರಾ ಬೆಂಬಲಿಸಿದ್ದರು. ಈ ಬಗ್ಗೆ ಅಸಮಾಧಾನ ತೋಡಿಕೊಂಡಿರುವ ಮೇರಿ ಕೋಮ್, ಬಿಂದ್ರಾ ಒಲಿಂಪಿಕ್ಸ್ ಪದಕ ವಿಜೇತರಾಗಿರಬಹುದು. ನಾನೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಹಲವು ಚಿನ್ನ ಗೆದ್ದಿದ್ದೇನೆ. ಬಾಕ್ಸಿಂಗ್‌ನಲ್ಲಿ ಹಸ್ತಕ್ಷೇಪ ಮಾಡಲು ಇದು ಅವರ ಕ್ರೀಡೆಯಲ್ಲ. ನಾನು ಶೂಟಿಂಗ್‌ನಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಅವರಿಗೆ ಬಾಕ್ಸಿಂಗ್‌ನ ಸರಿಯಾದ ಕಾನೂನು ತಿಳಿದಿಲ್ಲ. ಹಾಗಾಗಿ ಅವರು ಈ ವಿಷಯದಲ್ಲಿ ಸುಮ್ಮನಿರುವುದು ಒಳಿತು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News