ಬ್ಲಡ್ ಡೋನರ್ಸ್ ಮಂಗಳೂರು: 210ನೇ ರಕ್ತದಾನ ಶಿಬಿರ

Update: 2019-10-20 09:11 GMT

 ಗೋಳಿತೊಟ್ಟು : ಸೌಹಾರ್ದ ಬಳಗ ಕೋಲ್ಪೆ-ಗೋಳಿತೊಟ್ಟು , ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಎ.ಜೆ ಆಸ್ಪತ್ರೆಯ ಸಹಕಾರದೊಂದಿಗೆ ಬೃಹತ್ ರಕ್ತದಾನ ಶಿಬಿರವು ದ.ಕ.ಜಿಲ್ಲಾ ಸರಕಾರಿ ಮಾದರಿ ಹಿ.ಪ್ರಾ. ಶಾಲೆ ಗೋಳಿತೊಟ್ಟು ಇದರ ಸಭಾಂಗಣದಲ್ಲಿ ನಡೆಯಿತು.

ಸಭಾ ಕಾರ್ಯಕ್ರಮವನ್ನು ಬಿಷಾರ ಹೆಲ್ಪಿಂಗ್ ಹ್ಯಾಂಡ್ಸ್ ಕೊಲ್ಪೆ ಇದರ ಕಾರ್ಯನಿರ್ವಾಹಕ ಪೈಝಲ್ ಶೇಖ್ ಕೋಲ್ಪೆ ಹಾಗೂ ಸದಸ್ಯರಾದ ಶಾಹಜಾನ್ ಕೋಲ್ಪೆ ರಕ್ತದಾನ ಮಾಡುವ ಮೂಲಕ ಉದ್ಘಾಟನಾ ಕಾರ್ಯಕ್ರಮವನ್ನು ನೇರವೆರಿಸಿದರು. 

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬಿ‌.ಜೆ.ಎಂ ಕೋಲ್ಪೆ  ಖತೀಬ್ ರಶೀದ್ ರಹ್ಮಾನಿ ಮಾನವೀಯತೆಯ ಮೌಲ್ಯವನ್ನು ಎತ್ತಿಹಿಡಿಯಿರಿ, ರಕ್ತದಾನ ಮಾಡಿ ಸಮಾಜಕ್ಕೆ ಮಾದರಿಯಾಗಿ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಝಾಕರಿಯಾ ಮಸ್ಲಿಯಾರ್ ಕೊಚ್ಚಿಲ, ಬಿ.ಜೆ.ಎಂ ಕೋಲ್ಪೆ ಅಧ್ಯಕ್ಷ ಆದಂ ಎಂ,  ಎಚ್. ಮುಹಮ್ಮದ್ ಹಾಜಿ ಗೋಳಿತೊಟ್ಟು, ಬ್ಲಡ್ ಡೋನರ್ಸ್ ಮಂಗಳೂರು ಅಧ್ಯಕ್ಷ ಸಿದ್ಧೀಖ್ ಮಂಜೇಶ್ವರ, ಎ.ಜೆ. ಆಸ್ಪತ್ರೆ ವೈದ್ಯಾಧಿಕಾರಿ ಗೋಪಾಲಕೃಷ್ಣ, ಗೋಳಿತೊಟ್ಟು ಗ್ರಾ.ಪಂ. ಅಧ್ಯಕ್ಷೆ ಶಾಲಿನಿ ಶೇಖರ ಪೂಜಾರಿ, ಹಾರಿಸ್ ಪಿ.ಎಸ್ ಗೋಳಿತೊಟ್ಟು , ಕೆ.ಕೆ ಅಬೂಬಕ್ಕರ್ ಕೋಲ್ಪೆ, ಇಸ್ಮಾಯಿಲ್ ಕೆ.ಕೆ ಕೋಲ್ಪೆ, ಸಾಧಿಕ್ ಅತ್ತಾಜೆ , ರಫೀಖ್ ಕೋಲ್ಪೆ , ಬಶೀರ್ ಗೋಳಿತೊಟ್ಟು. ಇಮ್ರಾನ್ ಉಪ್ಪಿನಂಗಡಿ, ಮೊಹಿದ್ದೀನ್, ಅಬ್ದುಲ್ ಕುಂಞಿ, ಬಿ.ಜೆ.ಎಂ ಕೋಲ್ಪೆ, ರಫೀಕ್ ಸಖಾಫಿ ಅತೂರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಕಾರ್ಯನಿರ್ವಾಹಕರಾದ ದಾವೂದ್ ಬಾಜಾಲ್, ಫಾರೂಕ್ ಬಿಗ್ ಗ್ಯಾರಜ್, ಲತೀಫ್ ಉಪ್ಪಿನಂಗಡಿ, ಝಹೀರ್ ಶಾಂತಿನಗರ, ಫಾರೂಖ್ ರೊಮ್ಯಾಂಟಿಕ್, ಮುಖ್ತಾರ್ ಕುಂಬ್ರ. ಸೌಹಾರ್ದ ಬಳಗ ಕೋಲ್ಪೆ- ಗೋಳಿತೊಟ್ಟು ಇದರ ಕಾರ್ಯನಿರ್ವಾಹಕರಾದ ನವಾಝ್ ಶೇಖ್, ಸಾದೀಖ್ ಗೋಳಿತೊಟ್ಟು, ನೌಫಲ್ ಗೋಳಿತೊಟ್ಟು ಉಪಸ್ಥಿತರಿದ್ದರು‌. ಕಾರ್ಯಕ್ರಮವನ್ನು ನವಾಝ್ ಶೇಖ್ ಕೋಲ್ಪೆ ಸ್ವಾಗತಿಸಿ,  ರಝಾಕ್  ಸಾಲ್ಮರ ನಿರೂಪಿಸಿ, ಇಮ್ರಾನ್ ಉಪ್ಪಿನಂಗಡಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News