ಮಂಗಳೂರು: ಸಂತ ತೆರೆಸಾ ಚರ್ಚ್ ವಾರ್ಷಿಕೋತ್ಸವ

Update: 2019-10-20 10:24 GMT

ಮಂಗಳೂರು: ನಗರದ ಪಾಲ್ದನೆಯಲ್ಲಿರುವ ಸಂತ ತೆರೆಸಾ ಚರ್ಚಿನ ವಾರ್ಷಿಕೋತ್ಸವ ರವಿವಾರ ಬೆಳಗ್ಗೆ ಬಲಿಪೂಜೆಯೊಂದಿಗೆ ಆರಂಭಿಸಲಾಯಿತು.

ಬಲಿಪೂಜೆಯ ನೇತೃತ್ವವನ್ನು ವಂದನೀಯ ಫಾ ವಿ.ವಿ. ಮೆನೆಜಸ್ ಅವರು ವಹಿಸಿದ್ದು, ಪ್ರವಚನವನ್ನು ಮಂಗಳೂರು ಧರ್ಮ ಪ್ರಾಂತ್ಯದ ಜ್ಯುಡಿಸಿಯಲ್ ವಿಕಾರ್ ವಂದನೀಯ ವಾಲ್ಡರ್ ಡಿ’ ಮೆಲ್ಲೊ ನೀಡಿ, ಸಂತ ತೆರೆಸಾ ಅವರ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಬೇಕು. ದೇವರಲ್ಲಿ ಭಕ್ತಿ ಭರವಸೆ ಇಟ್ಟಿದ್ದು ಸಂತನಂತೆ ನಿರ್ಗತಿಕರ ಸೇವೆ ಮಾಡಿ ದೀನ ದಲಿತರಲ್ಲಿ ದೇವರನ್ನು ಕಾಣಬೇಕು ಎಂದರು.

ಬಲಿಪೂಜೆಯಲ್ಲಿ ವಂ. ಫಾದರುಗಳಾದ ಪಾವ್ಲ್ ಕ್ರಾಸ್ತಾ, ಡೆರಿಲ್ ಫೆರ್ನಾಂಡಿಸ್, ರೋಹಿತ್ ಡಿ’ ಕ್ರಾಸ್ತಾ, ಆಂಡ್ರೋ ಲಿಯೊ, ನೋಬರ್ಟ್ ಡಿ’ಸೋಜ, ಡೆನ್ನಿಸ್ ಎಂ ಪ್ರಭು, ಜೋಸೆಫ್ ಕಾರ್ಡೊಜ, ವಿನ್ಸೆಂಟ್ ಡಿ’ ಸೋಜ, ರೋಬರ್ಟ್ ಕ್ರಾಸ್ತಾ ಮುಂತಾದವರು ಉಪಸ್ಥಿತರಿದ್ದರು.

ಚರ್ಚಿನ ಪ್ರಧಾನ ಧರ್ಮಗುರು ವಂದನೀಯ ಫಾ. ಆಲ್ಬನ್ ಡಿ’ಸೊಜ ಅವರು ಹಬ್ಬಕ್ಕೆ ಸಹಕರಿಸಿದ ಎಲ್ಲರನ್ನು ಸನ್ಮಾನಿಸಿದರು. ಚರ್ಚಿನ ಉಪಾಧ್ಯಕ್ಷರಾದ ರೋಶನ್ ಲಸ್ಸಾದೊ ಹಾಗೂ ಕಾರ್ಯದರ್ಶಿ ವೀಣಾ ಲೋಬೊ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News