ಸಿಯಾನಿ ಫರ್ನಿಚರ್ ಫ್ಯಾಕ್ಟರಿ ಔಟ್‌ಲೆಟ್ ಸ್ಥಳಾಂತರ: ಹೊಸ ಶೋರೂಂ ಶುಭಾರಂಭ

Update: 2019-10-20 14:31 GMT

ಮಂಗಳೂರು, ಅ.20: ನಗರದಲ್ಲಿ ಕಳೆದ ಮೂರು ದಶಕಗಳಿಂದ ತೃಪ್ತಿಕರ ಗ್ರಾಹಕ ಸೇವೆ ನೀಡುತ್ತಾ ಬಂದಿರುವ ‘ಸಿಯಾನಿ’ ಫರ್ನಿಚರ್ ಮನೆ ಮತ್ತು ಕಚೇರಿ ರ್ನಿಚರ್‌ಗಳ, ವಿಶಾಲವಾದ ಹವಾನಿಯಂತ್ರಿತ ಶೋರೂಂ ಸ್ಥಳಾಂತರಗೊಂಡು ಯೆಯ್ಯಾಡಿಯಲ್ಲಿ ರವಿವಾರ ಸಂಜೆ ಶುಭಾರಂಭಗೊಂಡಿತು.

ಕಾರವಾರ ಧರ್ಮಪ್ರಾಂತದ ವಂದನೀಯ ಫಾ.ಉರ್ಬನ್ ಸಂತೋಷ್ ಫೆರ್ನಾಂಡಿಸ್ ಶೋರೂಮ್ ಉದ್ಘಾಟಿಸಿ ಆಶೀರ್ವಚನ ನೀಡಿದರು. ಸಿಯಾನಿ ರ್ನಿಚರ್ ಮಾಲಕರಾದ ಸೈಮನ್ ಡಿಸೋಜ, ಅವರ ಪತ್ನಿ ಅನಿತಾ ಡಿಸೋಜ, ಪುತ್ರ ರೀವ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು. ರೀವ್ ಡಿಸೋಜ ಸ್ವಾಗತಿಸಿ, ವಂದಿಸಿದರು. ಲೈನಲ್ ಡಿಸೋಜ ನಿರೂಪಿಸಿದರು.

ಗ್ರಾಹಕರ ತೃಪ್ತಿ ಮುಖ್ಯ: ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ಗುಣಮಟ್ಟದ ಪೀಠೋಪಕರಣಗಳನ್ನು ಗ್ರಾಹಕರಿಗೆ ತಲುಪಿಸುವ ಧ್ಯೇಯವನ್ನು ಹೊಂದಿರುವ ಸಿಯಾನಿ ರ್ನಿಚರ್ ಸಂಸ್ಥೆ ಗ್ರಾಹಕರ ತೃಪ್ತಿಯ ಕಡೆಗೆ ಮುಖ್ಯ ಗಮನ ಹರಿಸಿದೆ.
ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಕಸ್ಟಮೈಸ್ಡ್ ಸೇವೆಯನ್ನು ಗ್ರಾಹಕರಿಗೆ ನೀಡುತ್ತಾ ಬಂದಿದೆ. ಗುಣಮಟ್ಟ ಮತ್ತು ಮಾರಾಟದ ನಂತರದ ಸೇವೆಯ ಬಗೆಗಿನ ಬದ್ಧತೆಯಿಂದಾಗಿ ಸಂಸ್ಥೆ ಬೆಳೆದು ಬಂದು, ‘ಸಿಯಾನಿ’ ಬ್ರಾಂಡ್ ಮಂಗಳೂರು ಹಾಗೂ ಕರಾವಳಿ ಪ್ರದೇಶದ ಮೊದಲ ಆಯ್ಕೆಗಳಲ್ಲಿ ಒಂದಾಗಿದೆ.

ಗಟ್ಟಿಮುಟ್ಟಾದ ಹಾರ್ಡ್‌ವುಡ್ ಹಾಗೂ ಪ್ರಿಲ್ಯಾಮ್ ಬೋರ್ಡ್ ರ್ನಿಚರ್, ವಾರ್ಡ್‌ರೋಬ್, ಸೋಾ, ಬೆಡ್‌ರೂಂ ಸೆಟ್, ಮೊಡ್ಯುಲರ್ ಕಿಚನ್, ಡೈನಿಂಗ್ ಟೇಬಲ್ಸ್, ಕಚೇರಿ ಪೀಠೋಪಕರಣಗಳು ಮತ್ತು ಸಾಮಗ್ರಿಗಳು ದೊರೆಯಲಿವೆ. ಅತ್ಯುತ್ತಮ ಇಂಟೀರಿಯರ್ ಕೆಲಸಗಳಿಗಾಗಿ ಗ್ರಾಹಕರು ಶೋರೂಂಗೆ ಭೇಟಿ ನೀಡಬಹುದಾಗಿದೆ. ನಗರದೊಳಗೆ ಉಚಿತ ಸಾಗಾಟ ಮುಂತಾದ ಗ್ರಾಹಕರ ಅನುಕೂಲಕ್ಕೆ ತಕ್ಕಂತಹ ವ್ಯವಸ್ಥೆಗಳು ಇಲ್ಲಿ ಲಭ್ಯವಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News