ಪುತ್ತೂರು: ವಸತಿಗೃಹದಲ್ಲಿದ್ದ ವಿಭಿನ್ನ ಕೋಮುಗಳ ಜೋಡಿಯನ್ನು ವಶಕ್ಕೆ ಪಡೆದ ಪೊಲೀಸರು

Update: 2019-10-20 15:19 GMT

ಈಶ್ವರಮಂಗಲ: ಪುತ್ತೂರಿನ ವಸತಿಗೃಹವೊಂದರಲ್ಲಿ ಎರಡು ವಿಭಿನ್ನ ಕೋಮುಗಳ ಯುವ ಜೋಡಿಯೊಂದು ಇರುವ ಕುರಿತ ಹಿನ್ನಲೆಯಲ್ಲಿ ಬಜರಂಗದಳ ಕಾರ್ಯಕರ್ತರು ವಸತಿಗೃಹಕ್ಕೆ ತೆರಳಿ ಅಲ್ಲಿದ್ದ ಯುವಕ ಹಾಗೂ ಯುವತಿಯನ್ನು ವಿಚಾರಣೆ ನಡೆಸಿದ ಘಟನೆಯ ಮಾಹಿತಿ ತಿಳಿದ ಪುತ್ತೂರು ನಗರ ಪೊಲೀಸರು ವಸತಿಗೃಹಕ್ಕೆ ತೆರಳಿ ಜೋಡಿಯನ್ನು ವಶಕ್ಕೆ ತೆಗೆದುಕೊಂಡು, ಬಳಿಕ ಠಾಣೆಗೆ ಕರೆತಂದ ಘಟನೆ ರವಿವಾರ ನಡೆದಿದೆ.

ಮೂಲತಃ ರಾಜಸ್ಥಾನದವಳಾಗಿದ್ದು, ಪುತ್ತೂರಿನ ಸಾಮೆತ್ತಡ್ಕದಲ್ಲಿ ಹೆತ್ತವರೊಂದಿಗೆ ವಾಸ್ತವ್ಯವಿರುವ ಯುವತಿ ಇಲ್ಲಿನ ಕಾಲೇಜೊಂದರಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯಾಗಿದ್ದಾಳೆ. ಯುವಕ ಮುಂಬೈ ನಿವಾಸಿ ಎನ್ನಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಟೆಲಿಗ್ರಾಂ ಆ್ಯಪ್ ಮೂಲಕ ಸಂಪರ್ಕದೊಂದಿದ್ದ ಅವರಿಬ್ಬರು ವಸತಿಗೃಹದಲ್ಲಿ ಪರಸ್ಪರ ಭೇಟಿಯಾಗಲು ಆಗಮಿಸಿದ್ದರು ಎಂದು ತಿಳಿದು ಬಂದಿದೆ.

ಈ ಕುರಿತು ಮಾಹಿತಿ ಅರಿತ ಬಜರಂದಗಳದ ಕಾರ್ಯಕರ್ತರು ವಸತಿಗೃಹಕ್ಕೆ ತೆರಳಿ ಅವರಿಬ್ಬರನ್ನು ವಿಚಾರಿಸಿದ್ದರು. ವಸತಿಗೃಹದಲ್ಲಿ ಪತ್ತೆಯಾದ ಜೋಡಿಯನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದರು. ಬಳಿಕ ಯುವತಿಯ ಹೆತ್ತವರನ್ನು ಕರೆಸಿ ಅವರೊಂದಿಗೆ ಆಕೆಯನ್ನು ಕಳುಹಿಸಿಕೊಟ್ಟಿದ್ದಾರೆ ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News