ಪುತ್ತೂರು: 'ಬಲೇ ಬಲಿಪುಗ' ಪುರುಷರ ಹಾಗೂ ಮಹಿಳೆಯರ ಮ್ಯಾರಥಾನ್

Update: 2019-10-20 17:59 GMT

ಪುತ್ತೂರು: ದಿ ಪುತ್ತೂರು ಕ್ಲಬ್ ವತಿಯಿಂದ ಫಿಟ್ ಇಂಡಿಯಾ ಧ್ಯೇಯದಡಿ ರವಿವಾರ ನಡೆದ 'ಬಲೆ ಬಲಿಪುಗ' ಮ್ಯಾರಥಾನ್ ಓಟದ 10ಕಿ.ಮೀ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಹರ್ಷಿತ್ ಬೆಟ್ಟಂಪಾಡಿ ಹಾಗೂ ಮಹಿಳೆಯರ ವಿಭಾಗದಲ್ಲಿ ದೀಕ್ಷಾ ಬಿ. ಬೆಟ್ಟಂಪಾಡಿ ಅವರು ಪ್ರಥಮ ಸ್ಥಾನ ಪಡೆದಿದ್ದಾರೆ. ಅವರಿಬ್ಬರು ಪ್ರಥಮ ಬಹುಮಾನವಾಗಿ 24 ಇಂಚಿನ ಎಲ್‍ಇಡಿ ಟಿವಿ, ರೂ.2500 ನಗದು, ಪ್ರಮಾಣ ಪತ್ರ ಹಾಗೂ ಟ್ರೋಪಿಯನ್ನು ಪಡೆದುಕೊಂಡಿದ್ದಾರೆ. 

10 ಕಿ.ಮೀ. ಪುರುಷರ ವಿಭಾಗದ ಮ್ಯಾರಥಾನ್ ಓಟದಲ್ಲಿ ಸಚಿನ್ ಕೆ.ಎಸ್(ದ್ವಿತೀಯ), ನಿಶಾಂತ್ (ತೃತೀಯ), ಪುರುಷೋತ್ತಮ್ (ಚತುರ್ಥ) ಹಾಗೂ ಜಿತೇಶ್ ಎಸ್. (ಪಂಚಮ) ಸ್ಥಾನ ಪಡೆದಿದ್ದಾರೆ. ಮಹಿಳೆಯರ ವಿಭಾಗದಲ್ಲಿ ರೇಷ್ಮಾ (ದ್ವಿತೀಯ) ಹರ್ಷಿತಾ ಎ.( ತೃತೀಯ), ಸಂಧ್ಯಾ ಕೆ.ಎಸ್. (ಚತುರ್ಥ) ಹಾಗೂ ಬಿ.ಎಲ್.ಮಂಜುಳಾ (ಪಂಚಮ) ಸ್ಥಾನ ಪಡೆದಿದ್ದಾರೆ. 

5 ಕಿ.ಮೀ. ಪುರುಷರ ವಿಭಾಗದಲ್ಲಿ ಕಾರ್ತಿಕ್ ಪಿ. (ಪ್ರಥಮ) ನವೀನ್ ಡಿ. (ದ್ವಿತೀಯ), ದೀಕ್ಷಿತ್ ಎಂ. (ತೃತೀಯ), ಭುವನೇಶ್ ಎಸ್. (ಚತುರ್ಥ) ಹಾಗೂ ಹರ್ಷಿತ್ (ಪಂಚಮ) ಸ್ಥಾನ ಪಡೆದಿದ್ದು,  ಮಹಿಳೆಯರ ವಿಭಾಗದಲ್ಲಿ ಪ್ರಜ್ಞಾ ಎನ್. (ಪ್ರಥಮ) ಮಂಜುಶ್ರೀ (ದ್ವಿತೀಯ) ಜಯಶ್ರೀ (ತೃತೀಯ)  ಅನ್ವಿತಾ (ಚತುರ್ಥ) ಹಾಗೂ ಅಶ್ವಿನಿ (ಪಂಚಮ) ಸ್ಥಾನ ಪಡೆದುಕೊಂಡರು.

ಬಾಲಕರ ವಿಭಾಗದ 1ಕೀಮೀ ಸ್ಪರ್ಧೆಯಲ್ಲಿ ರಂಜಿತ್ (ಪ್ರಥಮ) ಕಿರಣ್ (ದ್ವಿತೀಯ) ನಂದನ್ (ತೃತೀಯ) ಹಾಗೂ ಬಾಲಕಿಯರ ವಿಭಾಗದಲ್ಲಿ ಶಿವಾನಿ (ಪ್ರಥಮ) ತೃಷಾ ಐ. (ದ್ವಿತೀಯ) ಹಾಗೂ ಕೃತಿ ಕೆ. (ತೃತೀಯ) ಸ್ಥಾನ ಪಡೆದುಕೊಂಡರು. 

5 ಕಿ.ಮೀ. ವಿಭಾಗದಲ್ಲಿ ದಿವ್ಯಶ್ರೀ, ರಂಜಿತಾ, ಜಗದೀಶ್ ಸುಳ್ಯ ಹಾಗೂ ಸುಲೋಚನಾ ವಿಶೇಷ ಬಹುಮಾನ ಪಡೆದುಕೊಂಡರು. ಎಲ್ಲಾ ವಿಭಾಗದಲ್ಲೂ ವಿಜೇತರಾದವರಿಗೆ ಪ್ರಶಸ್ತಿಹಾಗೂ ಗಿಷ್ಟ್‍ಕೂಪನ್ ಬಹುಮಾನ ನೀಡಲಾಯಿತು. 

ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ಬೆಳಿಗ್ಗೆ ಶಾಸಕ ಸಂಜೀವ ಮಠಂದೂರು ಅವರು ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿದರು. ಪುತ್ತೂರು ಡಿವೈಎಸ್‍ಪಿ ದಿನಕರ ಶೆಟ್ಟಿ,ನಗರಸಭಾ ಸದಸ್ಯೆ ವಿದ್ಯಾ ಗೌರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News