ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ: ಬಿರುಸಿನ ಮತದಾನ ಆರಂಭ

Update: 2019-10-21 04:10 GMT

ಕಾಸರಗೋಡು, ಅ.21: ಶಾಸಕರಾಗಿದ್ದ ಪಿ.ಬಿ.ಅಬ್ದುರ್ರಝಾಕ್ ರವರ ನಿಧನದಿಂದ ತೆರವಾಗಿದ್ದ ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಇಂದು ಬೆಳಗ್ಗೆ ಆರಂಭಗೊಂಡಿದ್ದು, ಮೊದಲ ಗಂಟೆಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ.

ಬೆಳಗ್ಗೆಯಿಂದಲೇ ಮತಗಟ್ಟೆಗಳಲ್ಲಿ ಸರತಿ ಸಾಲು ಕಂಡುಬರುತ್ತಿದೆ. ಬಿಗು ಪೊಲೀಸ್ ಬಂದೋಬಸ್ತ್ ನಲ್ಲಿ ಮತದಾನ ನಡೆಯುತ್ತಿದೆ.

ಮೊದಲ ಬಾರೀ ಮಂಜೇಶ್ವರ ಉಪಚುನಾವಣೆಗೆ ವೇದಿಕೆಯಾಗುತ್ತಿದ್ದು, ತ್ರಿಕೋನ ಸ್ಪರ್ಧೆಯ ಮೂಲಕ ಗಮನ ಸೆಳೆಯುತ್ತಿದೆ. 2017ರಲ್ಲಿ  ನಡೆದ ಚುನಾವಣೆಯಲ್ಲಿ ಯುಡಿಎಫ್ ನ ಪಿ.ಬಿ.ಅಬ್ದುರ್ರಝಾಕ್ ರವರು ಬಿಜೆಪಿಯ ಕೆ.ಸುರೇಂದ್ರನ್ ವಿರುದ್ಧ ಕೇವಲ 89 ಮತಗಳಿಂದ ಗೆಲುವು ಸಾಧಿಸಿದ್ದರು. ಇದೇ ಕಾರಣಕ್ಕೆ ಈ ಬಾರಿಯ ಚುನಾವಣೆ ರಾಷ್ಟ್ರ ಮಟ್ಟದಲ್ಲೇ ಗಮನಸೆಳೆಯುತ್ತಿದೆ.

2,14,799 ಮತದಾರರನ್ನು ಹೊಂದಿರುವ ಮಂಜೇಶ್ವರದಲ್ಲಿ  ಕ್ಷೇತ್ರದಲ್ಲಿ 198 ಮತಗಟ್ಟೆಗಳಲ್ಲಿ ಬೆಳಗ್ಗೆ ಏಳು ಗಂಟೆಗೆ ಮತದಾನ ಆರಂಭಗೊಂಡಿದ್ದು, ಸಂಜೆ ಆರರ ತನಕ ನಡೆಯಲಿದೆ.

20 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಎಲ್ಲ 198 ಮತಗಟ್ಟೆಗಳಲ್ಲಿ ಮತದಾರರ ವೀಡಿಯೋ  ರೆಕಾರ್ಡಿಂಗ್ ನಡೆಸಲಾಗುತ್ತಿದೆ.

ಎಲ್.ಡಿ.ಎಫ್. ಅಭ್ಯರ್ಥಿ ಎಂ.ಶಂಕರ ರೈರಯವರು ಅಂಗಡಿಮೊಗರು ಹಯರ್ ಸೆಕಂಡರಿ ಶಾಲೆಯ 165ನೇ  ಮತಗಟ್ಟೆಯಲ್ಲಿ ಬೆಳಗ್ಗೆ ಮತಚಲಾಯಿಸಿದರು.

ಯುಡಿಎಫ್ ನಿಂದ ಎಂ.ಸಿ.ಖಮರುದ್ದೀನ್, ಎಲ್.ಡಿ.ಎಫ್.ನಿಂದ ಎಂ.ಶಂಕರ ರೈ ಹಾಗೂ ಬಿಜೆಪಿಯಿಂದ ಕುಂಟಾರು ರವೀಶ ತಂತ್ರಿ ಸೇರಿದಂತೆ ಒಟ್ಟು ಏಳು ಮಂದಿಯ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News