‘ಟ್ಯಾಲೆಂಟ್’ನಿಂದ ಉಚಿತ ಮೊಬೈಲ್ ಕೋರ್ಸ್‌ಗೆ ಅರ್ಜಿ ಆಹ್ವಾನ

Update: 2019-10-21 07:42 GMT

ಮಂಗಳೂರು, ಅ.21: ಆರ್ಥಿಕವಾಗಿ ಹಿಂದುಳಿದಿರುವ ನಿರುದ್ಯೋಗಿ ಯುವಕರಿಗೆ ಉಚಿತವಾಗಿ ನಾಲ್ಕು ತಿಂಗಳ 32ನೇ ಬ್ಯಾಚಿನ ಮೊಬೈಲ್ ತರಬೇತಿ ಆಯೋಜಿಸಿದೆ.

ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಬಗ್ಗೆ ತರಬೇತಿ ನೀಡಲಾಗುವುದು. ತರಬೇತಿಗೆ ಹಾಜರಾಗಲು ಬಯಸುವವರು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅ.31ರೊಳಗೆ ಸಲ್ಲಿಸಬಹುದು. ಕನಿಷ್ಠ ವಿದ್ಯಾರ್ಹತೆ ಎಸೆಸೆಲ್ಸಿ ಮಾಡಿರಬೇಕು. ಅರ್ಜಿಯೊಂದಿಗೆ 3 ಭಾವಚಿತ್ರ, ಎಸೆಸೆಲ್ಸಿ ಮಾರ್ಕ್ ಕಾರ್ಡ್ ಜೆರಾಕ್ಸ್ ಮತ್ತು ರೇಶನ್/ಆಧಾರ್ ಕಾರ್ಡ್ ಜೆರಾಕ್ಸ್, ಇತ್ಯಾದಿ ದಾಖಲೆಗಳನ್ನು ಲಗತ್ತಿಸಿರಬೇಕು.
ಹೆಚ್ಚಿನ ಮಾಹಿತಿಗೆ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ (ರಿ) ವಿಶ್ವಾಸ್ ಕ್ರೌನ್, ಕಂಕನಾಡಿ ಮಂಗಳೂರು. ದೂರವಾಣಿ: 0824-4267883, 9972283365, 9844573983 ಅನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News