ವಳಚ್ಚಿಲ್: ಅಗಲಿದ ಸಮಸ್ತ ನೇತಾರರ ಅನುಸ್ಮರಣೆ, ಉಚಿತ ವೈದ್ಯಕೀಯ ಶಿಬಿರ

Update: 2019-10-21 08:43 GMT

ಮಂಗಳೂರು, ಅ.21: ವಳಚ್ಚಿಲ್ ಕೇಂದ್ರ ಜುಮಾ ಮಸೀದಿ, ಶಂಸುಲ್ ಉಲಮಾ ಕ್ರಿಯಾ ಸಮಿತಿ ಹಾಗೂ ಎಸ್ಕೆಎಸ್ಸೆಸ್ಸೆಫ್ ವಳಚ್ಚಿಲ್ ಶಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಶೈಖುನಾ ಎಂ.ಎ.ಖಾಸಿಂ ಉಸ್ತಾದ್ ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣೆ ಕಾರ್ಯಕ್ರಮ ಹಾಗೂ ಲೈಫ್ ಲೈನ್ ಕಣ್ಣೂರು ಪಾಲಿಕ್ಲಿನಿಕ್ ಹಾಗೂ ಡೆಲ್ಟಾ ಐ ಕೇರ್ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ಇತೀಚೆಗೆ ವಳಚ್ಚಿಲ್ ದರ್ಗಾ ವಠಾರದಲ್ಲಿ ನಡೆಯಿತು.

 ಬೆಳಗ್ಗೆ 9ರಿಂದ ಅಪರಾಹ್ನ 2ರವರೆಗೆ ಉಚಿತ ವೈದ್ಯಕೀಯ ತಪಸಣಾ ಶಿಬಿರ ಅಪರಾಹ್ನದ ಬಳಿಕ ಶಂಸುಲ್ ಉಲಮಾ ಮೌಲಿದ್ ಹಾಗೂ ಅಸರ್ ನಮಾಝ್ ಬಳಿಕ ಅನುಸ್ಮರಣಾ ಕಾರ್ಯಕ್ರಮ ಹಾಗೂ ಸಮರೋಪ ಸಮಾರಂಭ ನಡೆಯಿತು.

ವಳಚ್ಚಿಲ್ ಕೇಂದ್ರ ಜುಮಾ ಮಸೀದಿಯ ಖತೀಬ್ ಕೆ.ಪಿ.ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ ಕಾರ್ಯಕ್ರಮ ಉದ್ಘಾಟಿಸಿದರು. ವಳಚ್ಚಿಲ್ ಪದವಿನ ಬಿಜೆಎಂ ಖತೀಬ್ ಅಬೂಬಕರ್ ಸಖಾಫಿ ದುಆಗೈದರು. ಮಸೀದಿಯ ಅಧ್ಯಕ್ಷ ಹಾಜಿ ಎ.ಎಸ್.ಅಬ್ದುಲ್ ಹಮೀದ್ ಜೀಲಾನಿ ಅಧ್ಯಕ್ಷತೆ ವಹಿಸಿದ್ದರು.

ಎಸ್ಕೆಎಸ್ಸೆಸ್ಸೆಫ್ ವಳಚ್ಚಿಲ್ ಶಾಖೆಯ ಅಧ್ಯಕ್ಷ ದಾವೂದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಪ್ರೊ. ಅನೀಸ್ ಕೌಸರಿ ಮುಖ್ಯ ಭಾಷಣ ಮಾಡಿದರು. ಎಸ್ಕೆಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಕೆ.ಎಂ.ಖಾಸಿಂ ದಾರಿಮಿ ತೋಡಾರ್ ಅನುಸ್ಮರಣಾ ಭಾಷಣ ಮಾಡಿದರು.

 ಉಚಿತ ವೈದ್ಯಕೀಯ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಂಇಯ್ಯತುಲ್ ಮುಅಲ್ಲಿಮೀನ್ ಅಡ್ಯಾರ್ ಕಣ್ಣೂರು ರೇಂಜ್ ಅಧ್ಯಕ್ಷ ಕಮರುದ್ದೀನ್ ಫೈಝಿ, ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಯಮಾನಿ, ಮದ್ರಸ ಮ್ಯಾನೇಜ್‌ಮೆಂಟ್ ಅಡ್ಯಾರ್ ಕಣ್ಣೂರ್ ರೇಂಜ್ ಅಧ್ಯಕ್ಷ ನಝೀರ್ ವಳಚ್ಚಿಲ್ ಪದವು, ವಳಚ್ಚಿಲ್ ತನ್ವೀರುಲ್ ಇಸ್ಲಾಂ ಸ್ವಲಾತ್ ಕಮಿಟಿಯ ಅಧ್ಯಕ್ಷ ಹಾಜಿ ಉಮರ್ ಉಪಸ್ಥಿತರಿದ್ದರು.

ಶಂಸುಲ್ ಉಲಮಾ ಕ್ರಿಯಾ ಸಮಿತಿಯ ಅಧ್ಯಕ್ಷ ವಿ.ಸಮೀರ್ ಖಾನ್ ಸ್ವಾಗತಿಸಿದರು. ಲೈಫ್‌ಲೈನ್ ಕಣ್ಣೂರು ಪಾಲಿಕ್ಲಿನಿಕ್ ನಿರ್ದೇಶಕ ಡಾ.ಮುನಶ್ಶಿರ್ ಮತ್ತು ಸಿಬ್ಬಂದಿ ಹಾಗೂ ಡೆಲ್ಟಾ ಐಕೇರ್ ಮಂಗಳೂರು ಇದರ ಪಿಆರ್‌ಒ ಸೈಯದ್ ವಸೀಂ ಮತ್ತು ಸಿಬ್ಬಂದಿ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News