ಯೆನೆಪೊಯ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಪೀಡಿತ ಯುವಕನಿಗೆ ಅಪರೂಪದ ಯಶಸ್ವಿ ಶಸ್ತ್ರ ಚಿಕಿತ್ಸೆ

Update: 2019-10-21 15:40 GMT

ಮಂಗಳೂರು, ಅ.21; ದೇರಳಕಟ್ಟೆಯಲ್ಲಿರುವ ಯೆನೆಪೊಯ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಪೀಡಿತ 30 ವರ್ಷದ ಉಳ್ಳಾಲದ ಯುವಕನ ಬಲ ಕೈಗೆ ಕೃತಕ ಲೋಹದ ಮೂಳೆಯನ್ನು ಜೋಡಿಸಿ ಅಪರೂಪದ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿರುವುದಾಗಿ ಚಿಕಿತ್ಸೆ ನೀಡಿದ ತಂಡದ ವೈದ್ಯರು ಮತ್ತು ಯೆನೆಪೊಯ ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ವಿಭಾಗದ ತಜ್ಞ ಹಾಗೂ ವಿಭಾಗದ ಮುಖ್ಯಸ್ಥ ಮತ್ತು ಪ್ರಾಧ್ಯಾ ಪಕ ಡಾ.ಜಲಾಲುದ್ದೀನ್ ಅಕ್ಬರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಇದೊಂದು ಸಂಕೀರ್ಣ ವಾದ ಶಸ್ತ್ರ ಚಿಕಿತ್ಸೆಯಾಗಿದ್ದು ಸುಮಾರು 10ರಿಂದ 15 ಲಕ್ಷ ರೂ. ವೆಚ್ಚದ ಈ ಶಸ್ತ್ರ ಚಿಕಿತ್ಸೆಯನ್ನು ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಲಾಗಿದೆ ಎಂದರು

ಖ್ಯಾತ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞ ಡಾ.ಜಲಾಲುದ್ದೀನ್ ಅಕ್ಬರ್, ಯೆನೆಪೊಯ ವಿಶ್ವವಿದ್ಯಾಲಯ ದ ಉಪಕುಲಪತಿ ಹಾಗೂ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಯಲ್ಲಿ ನಿರ್ದೇಶಕರಾಗಿದ್ದ ಡಾ.ಎಂ. ವಿಜಯ ಕುಮಾರ್ ರವರ ಮಾರ್ಗದರ್ಶ ನದಲ್ಲಿ ಶಸ್ತ್ರ ಚಿಕಿತ್ಸೆಯನ್ನು ನಡೆಸಲಾಯಿತು. ಚಿಕಿತ್ಸೆ ನಡೆದ ಬಳಿಕ ಯುವಕ ಚೇತರಿಸಿಕೊಂಡಿದ್ದಾನೆ. ತನ್ನ ಬಲಗೈಯನ್ನು ಉಳಿಸಿಕೊಳ್ಳುವಂತಾಗಿದೆ ಎಂದು ಡಾ.ಜಲಾಲುದ್ದೀನ್ ಅಕ್ಬರ್ ತಿಳಿಸಿದ್ದಾರೆ.

ತಜ್ಞ ವೈದ್ಯರಾದ ಡಾ.ರೋಹನ್ ಶೆಟ್ಟಿ, ಡಾ.ಎಚ್.ಟಿ. ಅಮರ್ ರಾವ್ ಮತ್ತು ಕ್ಯಾನ್ಸರ್ ಚಿಕಿತ್ಸೆ ಮತ್ತು ರೇಡಿಯೇಶನ್ ತಜ್ಞರಾದ ಡಾ.ಗುರುಪ್ರಸಾ ದ್ .ಡಾ. ನಜೀಬ್, ಡಾ.ಸಾಯಿರಾ, ಮೂಳೆ ಮತ್ತು ಕೀಲು ವಿಭಾಗದ ತಜ್ಞರುಗಳಾದ ಡಾ.ಇಮ್ತಿಯಾಝ್ ಅಹಮ್ಮದ್ ಮತ್ತು ಡಾ.ಅಭಿಷೇಕ್ ಶೆಟ್ಟಿ ಸಹಕರಿಸಿದ್ದರು.

ಈ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಯನ್ನು ನಡೆಸುವ ವೈದ್ಯರ ಸಂಖ್ಯೆ ವಿರಳ. ಈ ಪೈಕಿ ಕಳೆದ 15 ವರ್ಷ ಗಳಲ್ಲಿ ಯಶಸ್ವಿಯಾಗಿ ನಡೆಸಿರುವ ವೈದ್ಯರ ಪೈಕಿ ಡಾ‌.ಜಮಾಲುದ್ದೀನ್ ಅಕ್ಬರ್  ಓರ್ವರಾಗಿದ್ದು ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಮೂಲಕ ಇಂತಹ ಚಿಕಿತ್ಸೆಯನ್ನು ಕನಿಷ್ಟ ವೆಚ್ಚದಲ್ಲಿ ಮಾಡುವ ವೈದ್ಯರ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಸುದ್ದಿಗೋಷ್ಠಿಯನ್ನು ನಡೆಸಿರುವುದಾಗಿ ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಪದ್ಮನಾಭ ಎಸ್  ತಿಳಿಸಿದ್ದಾರೆ.

ಸುದ್ದಿ ಗೋಷ್ಠಿ ಯಲ್ಲಿ  ವೈದ್ಯರಾದ ಡಾ. ರೋಹನ್ ಶೆಟ್ಟಿ, ಡಾ.ಎಚ್.ಟಿ.ಅಮರ್ ರಾವ್, ಡಾ.ಗುರು ಪ್ರಸಾದ್ ಭಟ್, ಡಾ‌ಇಮ್ತಿ ಯಾ ಝ್ ಅಹಮ್ಮದ್,ಅಭಿಷೇಕ್ ಶೆಟ್ಟಿ, ಡಾ.ಸುನಿತಾ ಶೆಟ್ಟಿ,ಮತ್ತು ವಿಜಯಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News