​ಪೆರ್ಮನ್ನೂರು: ತಡೆಗೋಡೆ ಕುಸಿತದಿಂದ ಮನೆಗಳಿಗೆ ಹಾನಿ; ಪರಿಹಾರಕ್ಕೆ ಮನವಿ

Update: 2019-10-21 12:48 GMT

ಮಂಗಳೂರು, ಅ.21: ಪೆರ್ಮನ್ನೂರು ಗ್ರಾಮದ ಶಿವಾಜಿನಗರದ ಖಾಸಗಿ ಕಟ್ಟಡವೊಂದರ ತಡೆಗೊಡೆಯು ಶುಕ್ರವಾರದ ಮಳೆಗೆ ಕುಸಿದ ಪರಿಣಾಮ ಸಮೀಪದ 5 ಮನೆಗಳಿಗೆ ಹಾನಿಯಾಗಿದೆ. ಉಳಿದ ತಡೆಗೋಡೆಗಳು ಕೂಡ ಅಪಾಯಕಾರಿ ಸ್ಥಿತಿಯಲ್ಲಿದೆ. ಹಾಗಾಗಿ ಹಾನಿಗೀಡಾದ ಮನೆಗಳ ಕುಟುಂಬಸ್ಥರಿಗೆ ಪರಿಹಾರ ನೀಡಬೇಕು ಮತ್ತು ಅಪಾಯಕಾರಿ ಸ್ಥಿತಿಯಲ್ಲಿರುವ ತಡೆಗೋಡೆಯ ಸುಸ್ಥಿಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಎಸ್‌ಡಿಪಿಐ ದ.ಕ.ಜಿಲ್ಲಾ ಸಮಿತಿಯ ಸದಸ್ಯ ಇಸ್ಮಾಯೀಲ್ ಶಾಫಿ ಬಬ್ಬುಕಟ್ಟೆ ನೇತೃತ್ವದ ನಿಯೋಗವು ಸೋಮವಾರ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಈ ತಡೆಗೋಡೆಯ ಅಪಾಯದ ಬಗ್ಗೆ ಹಲವು ಬಾರಿ ಉಳ್ಳಾಲ ನಗರಸಭಾ ಕಚೇರಿ ಮತ್ತು ಉಳ್ಳಾಲ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿತ್ತು. ಆದರೆ ಈ ಬಗ್ಗೆ ಯಾವುದೆ ರೀತಿಯ ಮುಂಜಾಗ್ರತಾ ಕ್ರಮ ಜರಗಿಸದ ಕಾರಣ ತಡೆಗೋಡೆ ಕುಸಿದು 5 ಮನೆಗಳಿಗೆ ಹಾನಿಯಾಗಿದೆ. ಹಾಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಮತ್ತು ಸಂತ್ರಸ್ಥರಿಗೆ ಪರಿಹಾರ ನೀಡಬೇಕು ಎಂದು ನಿಯೋಗ ಮನವಿ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News