ಫರಂಗಿಪೇಟೆ: ಮಸೀದಿಯೊಳಗೆ ನುಗ್ಗಿದ ಕಾರು; ಐವರಿಗೆ ಗಾಯ

Update: 2019-10-22 08:43 GMT

ಬಂಟ್ವಾಳ, ಅ.22: ಚಾಲಕನ‌ ನಿಯಂತ್ರಣ ತಪ್ಪಿದ ಓಮ್ನಿ ಕಾರೊಂದು ಮಸೀದಿಯ ಆವರಣ ಗೋಡೆಯೊಳಗೆ ನುಗ್ಗಿದ ಪರಿಣಾಮ ಚಾಲಕ ಸೇರಿ ಒಟ್ಟು ಐವರು ಗಾಯಗೊಂಡ ಘಟನೆ ಫರಂಗಿಪೇಟೆ ಸಮೀಪದ 10ನೇ ಮೈಲುಕಲ್ಲು ಎಂಬಲ್ಲಿ ಮಂಗಳವಾರ ನಡೆದಿದೆ.

ಹತ್ತನೇ ಮೈಲುಕಲ್ಲು ನಿವಾಸಿ ಇಸ್ಮಾಯೀಲ್, ಸುಲೈಮಾನ್ ಎಂಬವರು ಗಾಯಗೊಂಡವರೆಂದು ತಿಳಿದುಬಂದಿದ್ದು, ಕಾರಿನಲ್ಲಿದ್ದ ಮೂವರ ಪ್ರಯಾಣಿಕರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಪ್ರಸಾದ್ ನೇತ್ರಾಲಯಕ್ಕೆ ಸೇರಿದ ಓಮ್ನಿ ಕಾರು ಬಿ.ಸಿ.ರೋಡ್ ನಿಂದ ಮಂಗಳೂರು ಕಡೆಗೆ ತೆರಳುತ್ತಿರುವಾಗ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಫರಂಗಿಪೇಟೆ ಸಮೀಪದ ಹತ್ತನೇ ಮೈಲು ಕಲ್ಲು ಎಂಬಲ್ಲಿ ಚಾಲಕನ‌ ನಿಯಂತ್ರಣ ತಪ್ಪಿದೆ ಎನ್ನಲಾಗಿದೆ. ಪರಿಣಾಮ ಹೆದ್ದಾರಿ ಪಕ್ಕದಲ್ಲಿರುವ ತ್ವಾಹಾ ಜುಮಾ ಮಸೀದಿಯ ಆವರಣದೊಳಗೆ ನುಗ್ಗಿ ಇನ್ನೊಂದು ಬದಿಯ ಆವರಣ ಗೋಡೆಯಾಗಿ ಏರಿ ನಿಂತಿದೆ. ಈ ವೇಳೆ ಮಸೀದಿ ಆವರಣದಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ‌. ಘಟನೆಯಿಂದ ಕಾರಿನ ಮುಂಭಾಗ ಜಖಂಗೊಂಡಿದ್ದು, ಮಸೀದಿಗೂ ಹಾನಿಯಾಗಿದೆ.

ಅಪಘಾತ ದೃಶ್ಯ ಮಸೀದಿಯ‌ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ತೆರಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News