ಮಂಜನಾಡಿ ಅಲ್ ಮದೀನ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಎ.ಪಿ.ಉಸ್ತಾದ್ ಆಯ್ಕೆ

Update: 2019-10-22 12:09 GMT

ಮಂಗಳೂರು : ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಇದರ ನೂತನ ಅಧ್ಯಕ್ಷರಾಗಿ ಇಂಡಿಯನ್ ಗ್ರಾಂಡ್ ಮುಫ್ತಿ, ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಇವರನ್ನು ಸರ್ವಾನುಮತದಿಂದ ಆರಿಸಲಾಯಿತು. 

ಶರಫುಲ್ ಉಲಮಾ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ ಅವರ ನಿಧನದಿಂದ ತೆರವಾದ ಅಧ್ಯಕ್ಷ ಸ್ಥಾನದ ಆಯ್ಕೆಗಾಗಿ ಕೋಝಿಕ್ಕೋಡ್ ಕಾರಂದೂರ್ ಮರ್ಕಝ್ ನಲ್ಲಿ ನಡೆದ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಕಮಿಟಿಯ ಜನರಲ್ ಬೋಡಿ ಸಭೆಯಲ್ಲಿ  ಈ ಒಮ್ಮತದ ತೀರ್ಮಾನವನ್ನು ಕೈಗೊಳ್ಳಲಾಯಿತು.

ಅಲ್ ಮದೀನ ನಿರ್ದೇಶಕ ಮಂಡಳಿಯ ಅಧ್ಯಕ್ಷರೂ ಆಗಿರುವ ಶೈಖುನಾ ಎ.ಪಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ( ಅಧ್ಯಕ್ಷರು), ಸಯ್ಯಿದ್ ಇಸ್ಮಾಯೀಲ್ ತಂಙಳ್ ಅಲ್ ಹಾದೀ ಉಜಿರೆ (ಪ್ರಧಾನ ಕಾರ್ಯದರ್ಶಿ), ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಮಹಮೂದ್ ಫೈಝಿ ವಾಲೆಮುಂಡೇವು (ಉಪಾಧ್ಯಕ್ಷರು), ಮಜೀದ್ ಹಾಜಿ (ಕೋಶಾಧಿಕಾರಿ), ಅಬ್ದುಲ್ ಖಾದಿರ್ ಸಖಾಫಿ, ಏಶಿಯನ್ ಬಾವ ಹಾಜಿ (ಕಾರ್ಯದರ್ಶಿ) ಹಾಗೂ 15 ಮಂದಿ ಸದಸ್ಯರನ್ನು ಆರಿಸಲಾಯಿತು.

ಕೆ.ಪಿ.ಅಬ್ದುಲ್ ಖಾದರ್ ಸಖಾಫಿ ಅವರನ್ನು ಅಲ್ ಮದೀನ ಸಂಸ್ಥೆಯ ಜನರಲ್ ಮ್ಯಾನೇಜರ್ ಆಗಿಯೂ ನೇಮಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News