ಅ.25, 26: ಸಾಂಪ್ರದಾಯಿಕ ಗೂಡು ದೀಪ ರಚನೆ ತರಬೇತಿ

Update: 2019-10-23 05:30 GMT

ಮಂಗಳೂರು, ಅ.23: ದೀಪಾವಳಿಯ ಹಬ್ಬದ ಸಂದರ್ಭ ಬಳಕೆಗಾಗಿ ಸಾಂಪ್ರದಾಯಿಕ ಗೂಡುದೀಪ ಮತ್ತು ಆವೆ ಮಣ್ಣಿನ ಹಣತೆಗಳನ್ನು ತಯಾರಿಸುವ ' ಹೊಂಬೆಳಕು ' ಎಂಬ ಕಾರ್ಯಾಗಾರವನ್ನು ಅ.25 ಮತ್ತು 26ರಂದು ಕದ್ರಿ ರಾಕ್ಸ್ ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾಗಿದೆ.

ಕಲಾವಿದರಾದ ಪ್ರಾಣೇಶ್ ಕುದ್ರೋಳಿ ಗೂಡು ದೀಪ ರಚನೆ ಬಗ್ಗೆ, ರಾಜೇಶ್ ಶೆಟ್ಟಿ ಹಣತೆ ರಚನೆ ಬಗ್ಗೆ ತರಬೇತಿ ನೀಡಲಿರುವರು. ಅ. 25ರಂದು ಸಂಜೆ 4 ರಿಂದ 7 ರವರೆಗೆ ಮತ್ತು 26ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರಿಗೆ ಈ ತರಬೇತಿ ನಡೆಯಲಿದೆ. ಇದಕ್ಕೆ ಬೇಕಾಗುವ ಪರಿಕರಗಳನ್ನು ಕಾರ್ಯಾಗಾರದಲ್ಲಿ ನೀಡಲಾಗುವುದು.

ಆಸಕ್ತರು ಹರ್ಷ ಡಿಸೋಜ (9880137989 ) ಇವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸ ಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News